ನೀರು ಎಂದು ಸ್ಯಾನಿಟೈಸರ್ ಕುಡಿದ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ಕಮೀಷನರ್! - ಕಮಿಷರನ್ ರಮೇಶ್ ಪವಾರ್
🎬 Watch Now: Feature Video
ಮುಂಬೈ(ಮಹಾರಾಷ್ಟ್ರ): ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಬಜೆಟ್ ಮಂಡನೆ ಮಾಡ್ತಿದ್ದ ವೇಳೆ ಮುನ್ಸಿಪಾಲ್ ಕಮೀಷನರ್ ರಮೇಶ್ ಪವಾರ್ ನೀರು ಎಂದು ಸಾನಿಟೈಸರ್ ಕುಡಿದಿರುವ ಘಟನೆ ನಡೆದಿದೆ. ಬಜೆಟ್ ಮಂಡನೆ ಮಾಡುತ್ತಿದ್ದ ವೇಳೆ ನೀರು ಹಾಗೂ ಸಾನಿಟೈಸರ್ ಬಾಟಲ್ ಇಡಲಾಗಿತ್ತು. ಈ ವೇಳೆ, ಅವರು ನೀರಿನ ಬಾಟಲ್ ಎಂದುಕೊಂಡು ಸಾನಿಟೈಸರ್ ಸೇವನೆ ಮಾಡಿದ್ದಾರೆ. ತಕ್ಷಣವೇ ಸಾನಿಟೈಸರ್ ಹೊರಗೆ ಉಗುಳಿದಿದ್ದಾರೆ. ಇದಾದ ಬಳಿಕ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನೀರು ಎಂದುಕೊಂಡು ಸಾನಿಟೈಸರ್ ಸೇವನೆ ಮಾಡಿದ್ದೇನೆ. ಆದರೆ ತಕ್ಷಣವೇ ಹೊರಗೆ ಉಗುಳಿರುವೆ. ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದಿದ್ದಾರೆ.