ಮೋದಿ ಜನಪ್ರಿಯತೆ ಮೇಲೆ ಪ್ರತಿ ಸಲ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ: ಅಸಾದುದ್ದೀನ್ ಓವೈಸಿ ಖಡಕ್ ನುಡಿ - ಮಹಾರಾಷ್ಟ್ರ
🎬 Watch Now: Feature Video
ಹೈದರಾಬಾದ್: ಮಹಾರಾಷ್ಟ್ರ-ಹರಿಯಾಣದಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿದ್ದು, ಸರ್ಕಾರ ರಚನೆ ಮಾಡಲು ಇದೀಗ ಕಸರತ್ತು ನಡೆಸಿವೆ. ಇದರ ಮಧ್ಯೆ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿದ್ದು, ಪ್ರತಿ ಚುನಾವಣೆಯಲ್ಲಿ ಮೋದಿ ಜನಪ್ರಿಯತೆ ಮೇಲೆ ಬಿಜೆಪಿ ಗೆಲುವು ಸಾಧನೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕ್ಲಿನ್ ಸ್ವೀಪ್ ಮಾಡುವುದಾಗಿ ಹೇಳಿದ್ದ ಬಿಜೆಪಿ ಹೇಳಿಕೊಳ್ಳವಂತಹ ಪ್ರದರ್ಶನ ಹೊರಬಿದ್ದಿಲ್ಲ. ಅದೇ ರೀತಿ ಬಿಜೆಪಿ ಹರಿಯಾಣದಲ್ಲೂ ಸೋಲು ಕಂಡಿದೆ. ಪ್ರತಿ ಸಲ ಪ್ರಧಾನಿ ಮೋದಿ ಹೆಸರು ಹೇಳಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.