ಭದ್ರಾಚಲಂ ಪುಷ್ಕರ್ ಘಾಟ್‌ನಲ್ಲಿ 60 ಅಡಿ ತಲುಪಿದ ನೀರಿನ ಮಟ್ಟ: 6 ವರ್ಷಗಳಲ್ಲೇ ಇದು ದಾಖಲೆ - Central Water Commission (CWC)
🎬 Watch Now: Feature Video
ಭದ್ರಾಚಲಂ (ಆಂಧ್ರಪ್ರದೇಶ): ಉಪನದಿಗಳಿಂದ ಗೋದಾವರಿ ನದಿಗೆ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಆರು ವರ್ಷಗಳ ಅಂತರದ ನಂತರ ಭದ್ರಾಚಲಂ ಪುಷ್ಕರ್ ಘಾಟ್‌ನಲ್ಲಿ ನದಿಯ ನೀರಿನ ಮಟ್ಟ 60 ಅಡಿ ದಾಟಿದ್ದು, ಇದು ಮೂರನೇ ಎಚ್ಚರಿಕೆ ಮಟ್ಟವಾಗಿದೆ. ಹೀಗಾಗಿ, ಜಿಲ್ಲಾಡಳಿತ ಅಲ್ಲಿನ ಜನರಿಗೆ ಮುನ್ನೆಚ್ಚರಿಕೆ ರವಾನಿಸಿದೆ. 2014ರ ಸೆಪ್ಟೆಂಬರ್ 8ರಂದು (56.1 ಅಡಿ) ಈ ಎಚ್ಚರಿಕೆ ಮಟ್ಟ ದಾಟಿತ್ತು. 1986ರ ಆಗಸ್ಟ್ 16ರಂದು ಪುಷ್ಕರ್ ಘಾಟ್‌ನಲ್ಲಿ ಗರಿಷ್ಠ 75.6 ಅಡಿಗಳಷ್ಟು ಮಟ್ಟವನ್ನ ದಾಖಲಿಸಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಅಧಿಕಾರಿಗಳು ತಿಳಿಸಿದ್ದಾರೆ.