ಬೈಕ್ ಓವರ್ ಟೇಕ್ ಮಾಡಿದ್ದಕ್ಕೆ ಬಿತ್ತು ಆಟೋ ಡ್ರೈವರ್ ಹೆಣ! ವಿಡಿಯೋ... - ಕೊಯಂಬತ್ತೂರು ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4594079-115-4594079-1569767175155.jpg)
ಕೇವಲ ಓವರ್ ಟೇಕ್ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಓವರ್ ಟೇಕ್ ವಿಷಯದಲ್ಲಿ ಆಟೋ ಡ್ರೈವರ್ ಮತ್ತು ಬೈಕ್ ಸವಾರರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಯುವರಿಬ್ಬರು ನಡು ರಸ್ತೆಯಲ್ಲಿ ‘ನಮ್ಮ ಬೈಕೇ ಓವರ್ ಟೇಕ್ ಮಾಡ್ತೀಯಾ’ ಅಂತಾ ಆಟೋ ಡ್ರೈವರ್ ಅರುಣ್ ಪ್ರಸಾದ್ ಎಂಬಾತನನ್ನು ಮನಬಂದಂತೆ ಕಬ್ಬಿಣದ ರಾಡ್ನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆಟೋ ಡ್ರೈವರ್ಗೆ ಕಬ್ಬಿಣದ ರಾಡ್ನಿಂದ ಚುಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.