ಏರ್ ಇಂಡಿಯಾ -2021: ಆಗಸದಲ್ಲಿ ಸ್ವದೇಶಿ ನಿರ್ಮಿತ ಯುದ್ಧವಿಮಾನಗಳ ತಾಕತ್ತು ಅನಾವರಣ - ಬೆಂಗಳೂರು ಏರ್ ಇಂಡಿಯಾ ಶೋ
🎬 Watch Now: Feature Video
ಬೆಂಗಳೂರು: ಏರ್ ಇಂಡಿಯಾ- 2021ನ 13ನೇ ಆವೃತ್ತಿ ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದು, ಲೋಹದ ಹಕ್ಕಿಗಳು ಆಕಾಶವನ್ನ ಆಕರ್ಷವಾಗಿಸಿವೆ. ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್ ಸೂರ್ಯ ಕಿರಣ್, ಯುದ್ಧ ವಿಮಾನ ಸಾರಂಗ್ ಜಂಟಿ ಪ್ರದರ್ಶನ ನಡೆಯುತ್ತಿದ್ದು, ಸಾರಂಗ್ನಿಂದ ಡಾಗ್ ಫೈಟ್ ಪ್ರದರ್ಶನ ನಡೆಯುತ್ತಿದೆ. ಸೂರ್ಯ ಕಿರಣ್ ಹೆಲಿಕಾಪ್ಟರ್ಗಳು ಯುದ್ಧದ ಸಂದರ್ಭದಲ್ಲಿ ನಡೆಯುವ ಕಸರತ್ತನ್ನು ಪ್ರಸ್ತುತಪಡಿಸಿವೆ. ತೇಜಸ್ ಮುಂದಾಳತ್ವದಲ್ಲಿ 5 ಸಮರ ವಿಮಾನಗಳ ಹಾರಾಟ ನಡೆಯುತ್ತಿದೆ. ಎಲ್ಲವೂ ದೇಸೀ ನಿರ್ಮಿತ ಯುದ್ಧ ವಿಮಾನಗಳಾಗಿದ್ದು, ಆಗಸವನ್ನೇ ಆವರಿಸಿ ಭಾರತದ ಯುದ್ಧ ವಿಮಾನಗಳ ತಾಕತ್ತನ್ನು ಪ್ರದರ್ಶಿಸುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತಿವೆ.
Last Updated : Feb 3, 2021, 1:44 PM IST