ಗಂಡನೊಂದಿಗೆ ವಿವಾಹೇತರ ಸಂಬಂಧದ ಶಂಕೆ: ಮಹಿಳೆ ಮೇಲೆ ವಿವಾಹಿತೆ ಆ್ಯಸಿಡ್ ದಾಳಿ! - ವಿಶಾಖಪಟ್ಟಣಂ ಆ್ಯಸಿಡ್ ದಾಳಿ
🎬 Watch Now: Feature Video
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹೈದರಾಬಾದ್ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ತನ್ನ ಗಂಡನೊಂದಿಗೆ ವಿವಾಹೇತರ ಸಂಬಂಧ ಹೊಂದಿದ ಅನುಮಾನದಿಂದ ವಿವಾಹಿತೆಯೊಬ್ಬರು ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ. ಹೈದರಾಬಾದ್ ಮಹಿಳೆ ತನ್ನ ಸಹೋದರಿ ಮನೆಗೆ ತೆರಳಿ ಬರುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ಗಂಡನ ಜೊತೆ ವಿವಾಹಿತೆ ಪರಾರಿಯಾಗಿದ್ದಾಳೆ. ಆ್ಯಸಿಡ್ ದಾಳಿಯಿಂದ ಮಹಿಳೆಯ ದೇಹ ಸುಮಾರು ಶೇ.40ರಷ್ಟು ಭಾಗ ಸುಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.