ನಿಯಂತ್ರಣ ಕಳೆದುಕೊಂಡು ಜನ್ರ ಮೇಲೆ ಹರಿದ ಟ್ರಕ್: ನಾಲ್ವರು ಸಾವು, ಏಳು ಮಂದಿ ಗಂಭೀರ! - ಟ್ರಕ್ ಹರಿದು ನಾಲ್ವರು ಸಾವು
🎬 Watch Now: Feature Video
ಬುರ್ದ್ವಾನ್(ಪಶ್ಚಿಮ ಬಂಗಾಳ) : ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ವೊಂದು ನಿಯಂತ್ರಣ ಕಳೆದುಕೊಂಡು ಜನರ ಮೇಲೆ ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಬರ್ದ್ವಾನ್ನ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಮೊದಲು ಬೈಕ್ಗೆ ಡಿಕ್ಕಿ ಹೊಡೆದಿರುವ ಟ್ರಕ್, ತದನಂತರ ಸೈಕಲ್ ಹಾಗೂ ರಸ್ತೆ ಪಕ್ಕದಲ್ಲಿ ನಿಂತಿದ್ದ 11 ಜನರ ಮೇಲೆ ಹರಿದಿದೆ. ಗಾಯಗೊಂಡಿರುವವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.