ಚಂಡೀಗಢ: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬಿಎಂಡಬ್ಲ್ಯು ಕಾರ್! - ಸಂಪೂರ್ಣ ಸುಟ್ಟುಹೋದ ಬಿಎಂಡಬ್ಲ್ಯು
🎬 Watch Now: Feature Video
ಚಂಡೀಗಢ: ನಗರದ ಸೆಕ್ಟರ್ 46/477ರಲ್ಲಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿದೆ. ಕಾರು ನಿಧಾನವಾಗುತ್ತಿದ್ದಂತೆ, ಚಾಲಕ ಮತ್ತು ಕಾರ್ನಲ್ಲಿದ್ದವರು ಹೊರ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಇದಾದ ಕೂಡಲೇ ಅಗ್ನಿಶಾಮಕ ಇಲಾಖೆ ಮಾಹಿತಿ ಪಡೆದು,ಬೆಂಕಿಯನ್ನು ನಿಯಂತ್ರಿಸಿತು. ಅಗ್ನಿಶಾಮಕ ಇಲಾಖೆ ಬರುವ ಮೊದಲೇ ಬಿಎಂಡಬ್ಲ್ಯು ಕಾರು ಸಂಪೂರ್ಣ ಸುಟ್ಟುಹೋಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಕಾರು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿದೆ ಎಂದು ತಿಳಿದು ಬಂದಿದೆ.