ಕಾಲಿನಿಂದ ಒದ್ದು, ಕಂದಮ್ಮನಿಗೆ ಥಳಿಸಿದ ತಾಯಿ: ತನಿಖೆಗೆ ಆದೇಶಿಸಿದ ಎಸ್ಪಿ - ಹರಿದ್ವಾರದಲ್ಲಿ ಮಗುವಿಗೆ ಥಳಿಸಿದ ತಾಯಿ
🎬 Watch Now: Feature Video
ಹರಿದ್ವಾರ: ಕಪಾಳಕ್ಕೆ ಹೊಡೆದು, ಕಾಲಿನಿಂದ ಒದಿಯುವ ಮೂಲಕ, ತಾಯಿಯೊಬ್ಬಳು ತನ್ನ ಕಂದಮ್ಮನಿಗೆ ಕ್ರೂರವಾಗಿ ಥಳಿಸಿರುವ ಘಟನೆ ನಗರದ ಜ್ವಾಲಾಪುರ ಕೊತ್ವಾಲಿ ಪ್ರದೇಶದ ಸುಭಾಷ್ ನಗರದಲ್ಲಿ ನಡೆದಿದೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ, ಹರಿದ್ವಾರ ಎಸ್ಪಿ ತಾಯಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಜ್ವಾಲಾಪುರ ಇನ್ಸ್ಪೆಕ್ಟರ್ಗೆ ಸೂಚಿಸಿದ್ದಾರೆ.