ವೃದ್ಧ ವ್ಯಕ್ತಿ ಕೈಗೆ ಸರಪಳಿ ಕಟ್ಟಿ ಕೆಲಸ ಮಾಡಿಸುತ್ತಿರುವ ವಿಡಿಯೋ ವೈರಲ್! - ವೃದ್ಧ ವ್ಯಕ್ತಿ ಕೈಗೆ ಸರಪಳಿ ಕಟ್ಟಿ ಕೆಲಸ ಮಾಡಿಸುತ್ತಿರುವ ವಿಡಿಯೋ ವೈರಲ್
🎬 Watch Now: Feature Video
ಜೈಪುರ : ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಅಮಾನವೀಯ ವಿಡಿಯೋವೊಂದು ವೈರಲ್ ಆಗಿದೆ. ಜೈಪುರದ ದೆಹಲಿ ರಸ್ತೆಯಲ್ಲಿರುವ ಪಿಲಿಯ ತಲೈ ಮೊರ್ ಬಳಿ ಧಾಬಾದಲ್ಲಿ ಸೆರೆ ಹಿಡಿದ ವಿಡಿಯೋ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವೃದ್ಧರೊಬ್ಬರು ರಾತ್ರಿಯ ಕತ್ತಲೆಯಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ. ಅಲ್ಲದೇ ಅವರ ಕೈಗೆ ಸರಪಳಿ ಕಟ್ಟಲಾಗಿದೆ.