thumbnail

ಆಸ್ಪತ್ರೆಗೆ ಹೋಗದೇ ಕೋವಿಡ್​ ಗೆದ್ದ 92ರ ವೃದ್ಧ.. ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​!

By

Published : Apr 26, 2021, 7:39 PM IST

ಬಾಲಾಘಾಟ್​(ಮಧ್ಯಪ್ರದೇಶ): ಕೊರೊನಾ ಪಾಸಿಟಿವ್​ ಎಂಬ ಹೆಸರು ಕೇಳಿದ ತಕ್ಷಣವೇ ಅನೇಕರು ಭಯ ಭೀತರಾಗುತ್ತಾರೆ. ಆದರೆ ಇಲ್ಲೋರ್ವ 92ರ ವೃದ್ಧ ತುಳಸಿರಾಮ್​ ಸೇಥಿಯಾ ಮನೆಯಲ್ಲಿದ್ದುಕೊಂಡೇ ಕೊರೊನಾ ಮಣಿಸಿದ್ದಾರೆ. ಇದೀಗ ಇವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಪ್ರತ್ಯೇಕವಾಗಿ ವಾಸಿಸಲು ಶುರು ಮಾಡಿದ್ದ ತುಳಸಿರಾಮ್​, ನಿತ್ಯ ತಪ್ಪದೇ ವ್ಯಾಯಾಮ ಮಾಡುವ ಜೊತೆಗೆ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಜತೆಗೆ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಕೋವಿಡ್​ ಗೆದ್ದಿದ್ದಾರೆ. ಸಂಪೂರ್ಣವಾಗಿ ಆರೋಗ್ಯವಾಗುತ್ತಿದ್ದಂತೆ ತಮ್ಮ ಹಿರಿಯ ಮಗ, ಮೊಮ್ಮಗ ಹಾಗೂ ಮರಿ ಮೊಮ್ಮಗನೊಂದಿಗೆ ಸಖತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.