ಎಸ್ಪಿಬಿಯ ಚಾಕೋಲೇಟ್ ಪ್ರತಿಮೆ ತಯಾರಿಸಿ ಗಾನ ಗಂಧರ್ವನಿಗೆ ನಮನ - S. K. Muruganantham
🎬 Watch Now: Feature Video
ಸೇಲಂ (ತಮಿಳುನಾಡು): ಸಂಗೀತ ಮಾಂತ್ರಿಕ ದಿವಂಗತ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥವಾಗಿ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಕೇಕ್ ಕೆಫೆಯೊಂದು ಕೇಕ್ನಲ್ಲಿ ಎಸ್ಪಿಬಿಯ ಪ್ರತಿಮೆ ನಿರ್ಮಿಸಿದೆ. 6 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಮೂರು ದಿನಗಳ ಕಾಲ ಆರು ಜನರು ಸೇರಿ ತಯಾರಿಸಿದ್ದಾರೆ. 100 ಕೆಜಿ ಸಕ್ಕರೆ, 80 ಮೊಟ್ಟೆ ಮತ್ತು ಸಿಹಿತಿಂಡಿಗಳನ್ನು ಇದರಲ್ಲಿ ಬಳಸಲಾಗಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು ಎಂದು ಕೆಫೆ ಮಾಲೀಕ ಎಸ್.ಕೆ.ಮುರುಗಾನಂತಂ ಹೇಳುತ್ತಾರೆ.