ಮದುವೆ ಸಮಾರಂಭದಲ್ಲಿ ಆಹಾರ ಸೇವನೆ: 150ಕ್ಕೂ ಹೆಚ್ಚು ಮಂದಿಗೆ ಅನಾರೋಗ್ಯ! - ವಿಷಾಹಾರ ಸೇವಿಸಿ 150 ಮಂದಿ ಅನಾರೋಗ್ಯ
🎬 Watch Now: Feature Video
ಜೆಮ್ಷೆಡ್ಪುರ: ಇಲ್ಲಿನ ಯಶೋಧನಗರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಅನೇಕರು ಊಟ ಸೇವನೆ ಮಾಡಿ ಅನಾರೋಗ್ಯಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಆಹಾರ ಸೇವನೆ ಮಾಡಿರುವುದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, 10 ಜನರ ಸ್ಥಿತಿ ಗಂಭೀರವಾಗಿದೆ. ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಆಹಾರ ಸೇವನೆ ಮಾಡಿದ ನಂತರ ಅನೇಕ ಜನರು ವಾಂತಿ ಮಾಡಲು ಶುರು ಮಾಡಿದ್ದು, ಶನಿವಾರ ಬೆಳಗ್ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈಗಾಗಲೇ ಅಸ್ವಸ್ಥರಾದವರನ್ನ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated : Nov 24, 2019, 6:50 AM IST