ಕಳೆದ ವರ್ಷ ಕೋವಿಡ್ಗಿಂತಲೂ ರಸ್ತೆ ಅಪಘಾತದಲ್ಲೇ ಹೆಚ್ಚು ಸಾವು: ನಿತಿನ್ ಗಡ್ಕರಿ - ರಸ್ತೆ ಅಪಘಾತದಲ್ಲಿ ಹೆಚ್ಚು ಸಾವು
🎬 Watch Now: Feature Video
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾವಳಿಗಿಂತಲೂ ಕಳೆದ ವರ್ಷ ಅತಿ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ನಿಂದ 1.46 ಲಕ್ಷ ಜನರು ಸಾವನ್ನಪ್ಪಿದ್ರೆ, ರಸ್ತೆ ಅಪಘಾತದಿಂದ 1.50 ಲಕ್ಷ ಜನರು ಸಾವಿಗೀಡಾದರು. ರಸ್ತೆ ಅಪಘಾತ ಕಡಿಮೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಗಂಭೀರವಾಗಿದ್ದು, 18-35 ವಯಸ್ಸಿನ ಜನರು ಇದರಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.