ವಾಟ್ಸಾಪ್ ಗ್ರೂಪ್‌ನಲ್ಲಿ ಪಾಕ್ ಧ್ವಜ ಪೋಸ್ಟ್: ವಿದ್ಯಾರ್ಥಿ ಅಮಾನತುಗೊಳಿಸಲು ಎಬಿವಿಪಿ ಪ್ರತಿಭಟನೆ - ಸಹ್ಯಾದ್ರಿ ಕಾಲೇಜಿನಲ್ಲಿ ಎಬಿವಿಪಿ ಪ್ರತಿಭಟನೆ
🎬 Watch Now: Feature Video
ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನ ಬಿಸಿಎ 'ಸಿ' ವಿಭಾಗದ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ಪಾಕಿಸ್ತಾನ ಧ್ವಜವನ್ನು ಪೋಸ್ಟ್ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಪ್ರತಿಭಟನೆ ನಡೆಸಿದೆ. ಫೆ.8ರಂದು ಈ ಘಟನೆ ನಡೆದಿದ್ದು, ಧ್ವಜ ಪೋಸ್ಟ್ ಮಾಡಿದ ದಿನವೇ ಪ್ರತಿಭಟನೆ ನಡೆಸಿ ಪ್ರಾಂಶುಪಾಲರಿಗೆ ಎಬಿವಿಪಿ ಮನವಿ ಸಲ್ಲಿಸಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿರದ ಕಾರಣ ಮತ್ತೆ ಇಂದು ಪ್ರತಿಭಟನೆ ನಡೆಸಿ ಕುವೆಂಪು ವಿವಿ ಉಪಕುಲಸಚಿವ ಕುಮಾರಸ್ವಾಮಿ ಹಾಗೂ ದೂರ ಶಿಕ್ಷಣ ಕೇಂದ್ರದ ರಿಜಿಸ್ಟ್ರಾರ್ ಬಿರಾದರ್ ಅವರಿಗೆ ಮನವಿ ಸಲ್ಲಿಸಿದರು.
Last Updated : Feb 3, 2023, 8:18 PM IST