ಜೇಮ್ಸ್ ಜಾತ್ರೆ: ಅಪ್ಪು ಕಟೌಟ್ ಮುಂದೆ 1001 ಈಡುಗಾಯಿ ಒಡೆದ ಫ್ಯಾನ್ಸ್, ಪ್ರೇಕ್ಷಕರಿಗೆ ಚಿಕನ್ ಪಲಾವ್ ವಿತರಣೆ - ಪುನೀತ್ ರಾಜಕುಮಾರ್ 47ನೇ ಹುಟ್ಟುಹಬ್ಬ
🎬 Watch Now: Feature Video
ಚಾಮರಾಜನಗರ: ಜಿಲ್ಲೆಯಲ್ಲಿ 'ಜೇಮ್ಸ್' ಅಬ್ಬರ ಜೋರಾಗಿದ್ದು ಸಿನಿಮಾ ಥಿಯೇಟರ್ಗಳ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜಿಲ್ಲಾದ್ಯಂತ ಐದಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಬಿಡುಗಡೆಯಾಗಿದ್ದು ಥಿಯೇಟರ್ಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬುಧವಾರದಿಂದಲೇ ಅಪ್ಪು ಕಾಟೌಟ್ಗಳು ಆರ್ಭಟಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ. ಎಲ್ಲ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಮಹಾಪೂರವೇ ಸೇರಿದ್ದು, ನಗರದ ಗುರುರಾಘವೇಂದ್ರ ಚಿತ್ರಮಂದಿರದ ಮುಂದಿನ ಅಪ್ಪು ಕಟೌಟ್ಗೆ 1001 ಈಡುಗಾಯಿ ಒಡೆಯಲಾಗಿದೆ. ಜೊತೆಗೆ ಮಧ್ಯಾಹ್ನ ಚಿತ್ರ ವೀಕ್ಷಣೆಗೆ ಬರುವ ಎಲ್ಲರಿಗೂ ಅಭಿಮಾನಿಗಳಿಂದ ಚಿಕನ್ ಪಲಾವ್ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
Last Updated : Feb 3, 2023, 8:20 PM IST