ಮೈಸೂರು: ಅನಾರೋಗ್ಯದ ಕಾರಣಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ - ಮೈಸೂರಿನಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬ ಸಜೀವ ದಹನ
🎬 Watch Now: Feature Video
ಮೈಸೂರು: ಕಾರಿನಲ್ಲಿ ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ನಿವೃತ್ತ ಸರ್ಕಾರಿ ನೌಕರ ಶಿವಣ್ಣ(61) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕಿಡ್ನಿ, ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಶಿವಣ್ಣ, ಮನೆಯಲ್ಲಿ ಒಬ್ಬರೆ ಇದ್ದರು. ಅನಾರೋಗ್ಯದಿಂದ ಬೇಸತ್ತಿದ್ದ ಶಿವಣ್ಣ, ತಮ್ಮ ಊರಿನಿಂದ ಮೈಸೂರಿನ ಬಾಪೂಜಿನಗರದ ನಿರ್ಜನ ಪ್ರದೇಶಕ್ಕೆ ಅಲ್ಟೋ ಕಾರಿನಲ್ಲಿ ಬಂದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರಸ್ವತಿಪುಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:24 PM IST