ಸುದೀಪ್ ಇನ್ನೂ ಕಾಂಗ್ರೆಸ್ ಪಕ್ಷ ಸೇರಿಲ್ಲ: ಸಚಿವ ಸುಧಾಕರ್ - ಕನ್ನಡ ಚಲನಚಿತ್ರದ ಖ್ಯಾತ ನಟ ಕಿಚ್ಚ ಸುದೀಪ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17662173-thumbnail-4x3-sanju.jpg)
ಚಿಕ್ಕಬಳ್ಳಾಪುರ: ನಟ ಸುದೀಪ್ ಅವರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ಸುದೀಪ್ ಕಾಣಿಸಿಕೊಂಡ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. "ನನ್ನ ಪ್ರಕಾರ ಸುದೀಪ್ ಇನ್ನೂ ಕಾಂಗ್ರೆಸ್ ಸೇರಿಲ್ಲ. ಅವರು ರಾಜ್ಯದ ಉತ್ತಮ ನಾಯಕ ನಟ. ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸುದೀಪ್ ಹಾಗೂ ದರ್ಶನ್ ಯಾವುದೇ ಪಕ್ಷಕ್ಕೆ ಸೇರಿದ್ರೂ ಆ ಪಕ್ಷಗಳಿಗೆ ಒಳ್ಳೆಯದಾಗುತ್ತದೆ. ಅವರು ಏನು ತೀರ್ಮಾನ ತಗೊಳ್ತಾರೋ ನೋಡೋಣ" ಎಂದರು.
ಇದನ್ನೂ ಓದಿ: ಸಿಡಿ ಪ್ರಕರಣ: ಸಿಬಿಐಗೆ ತನಿಖೆ ಕುರಿತು ಜಾರಕಿಹೊಳಿ ಮಾತುಕತೆ ನಡೆಸಿಲ್ಲ- ಪ್ರಹ್ಲಾದ್ ಜೋಷಿ
Last Updated : Feb 6, 2023, 4:07 PM IST