ಪೆಟ್ರೋಲ್​ ಬಂಕ್​ನಲ್ಲಿ ದರೋಡೆ; ಸೆಕ್ಯೂರಿಟಿ ಗಾರ್ಡ್ ಕೈ ಕಟ್ಟಿಹಾಕಿ ಹಲ್ಲೆ!

🎬 Watch Now: Feature Video

thumbnail

By

Published : Jun 9, 2022, 6:50 PM IST

Updated : Feb 3, 2023, 8:23 PM IST

ಕೋಯಿಕ್ಕೋಡ್‌ (ಕೇರಳ): ಕೋಯಿಕ್ಕೋಡ್‌ ಜಿಲ್ಲೆಯ ಕೊಟ್ಟೂಲಿಯಲ್ಲಿರುವ ಪೆಟ್ರೋಲ್ ಬಂಕ್​ನಲ್ಲಿ ಬುಧವಾರ ತಡರಾತ್ರಿ 1.40ರ ಸುಮಾರಿಗೆ ದರೋಡೆ ನಡೆದಿದೆ. ದರೋಡೆಕೋರ ಸೆಕ್ಯೂರಿಟಿ ಗಾರ್ಡ್ ಕೈಗಳನ್ನು ಟವೆಲ್‌ನಿಂದ ಕಟ್ಟಿ ಹಾಕಿ ಆತನ ಮೇಲೆ ಹಲ್ಲೆ ನಡೆಸಿ ಅಲ್ಲಿದ್ದ ನಗದನ್ನು ಎಗರಿಸಿ ಪರಾರಿಯಾಗಿದ್ದಾನೆ. ಪೆಟ್ರೋಲ್ ಬಂಕ್​ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಸೆಕ್ಯೂರಿಟಿ ಗಾರ್ಡ್ ಮುಹಮ್ಮದ್ ರಫೀ ಗಾಯಗೊಂಡಿದ್ದು, ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಯಿಕ್ಕೋಡ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದರೋಡೆಕೋರನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಖದೀಮ 50,000 ರೂಪಾಯಿ ದೋಚಿರುವುದಾಗಿ ತಿಳಿದುಬಂದಿದೆ.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.