ಲೈವ್​ಲ್ಲಿ ನಡೀತು ಕಾರ್​ ಟ್ರಕ್​ನ ಆ್ಯಕ್ಷನ್​ ಸೀನ್​; ಕಾರಿಗೆ ಡಿಕ್ಕಿ ಹೊಡೆದು 3 ಕಿ.ಮೀ ಎಳೆದೊಯ್ದ ಟ್ರಕ್​ - ಟ್ರಕ್ ಕಾರಿಗೆ ಡಿಕ್ಕಿ

🎬 Watch Now: Feature Video

thumbnail

By

Published : Feb 13, 2023, 10:23 AM IST

Updated : Feb 14, 2023, 11:34 AM IST

ಮೀರತ್: ಸಿನಿಮೀಯ ರೀತಿಯ ಆ್ಯಕ್ಷನ್​ ​ಸೀನ್​ವೊಂದು ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಹೌದು, ನಾವು ಮೂವಿಗಳಲ್ಲಿ ನೋಡುವಂಥಹ ನಡುರಸ್ತೆಯಲ್ಲಿನ ವಾಹನಗಳ ಪೈಟ್​ ಭಾನುವಾರ ತಡರಾತ್ರಿ ಮೀರತ್​ನ ಪರ್ತಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಅಂತಹದೇನಪ್ಪ ಅಂತಿದ್ದೀರಾ? ಟ್ರಕ್​ ಚಾಲಕನೊಬ್ಬ ಕಾರಿಗೆ ಡಿಕ್ಕಿ ಹೊಡೆದದಲ್ಲದೆ ಆ ಕಾರನ್ನು 3 ಕಿ.ಲೋ ಮೀಟರ್​ ವರೆಗೆ ಹಾಗೆ ತನ್ನ ವಾಹನದ ಮುಂಭಾಗದಿಂದ ದೂಡಿಕೊಂಡೆ ಹೋಗಿದ್ದಾನೆ. ಇಷ್ಟಾದರು ಪವಾಡದಂತೆ ಯಾವುದೇ ಪ್ರಾಣಾಪಾಯವಿಲ್ಲದೆ ಕಾರಿನಲ್ಲಿ ನಾಲ್ವರು ಬದುಕುಳಿದಿದ್ದಾರೆ. ಇನ್ನು, ಟ್ರಕ್​ ಚಾಲಕ ಕುಡಿತ ಮತ್ತಿನಲ್ಲಿ ಗಾಡಿ ಚಲಾಯಿಸಿದರಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.  

ಕಾರಿನವರು ರಿಥಾನಿ ಛೇದಕದಿಂದ ಯು-ಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದು ಎಳೆಯಲು ಪ್ರಾರಂಭಿಸಿದೆ. ಘಟನೆ ಕಣ್ಣಾರೆ ನೋಡುತ್ತಿದ್ದ ಸಾರ್ವಜನಿಕರು ಬೊಬ್ಬೆ ಹೊಡೆದರು ಚಾಲಕನಿಗೆ ಪರಿವೆ ಇಲ್ಲದೆ 3 ಕಿಲೋ ಮೀಟರ್​ ಕಾರಿನೊಂದಿಗೆ ಸಾಗಿದ್ದಾನೆ. ನಂತರ ಟ್ರಕ್​ ಚಾಲಕ ಇದ್ದಕ್ಕಿದ್ದಂತೆ ಡಂಪರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಟ್ರಕ್​ ನಿಂತಿದೆ. ಅಷ್ಟರಲ್ಲೇ ಕಾರಿನ ಚಕ್ರಗಳ ರಬ್ಬರ್ ಕೂಡ ಸವೆದು ಮಾಯವಾಗಿತ್ತು. ಇನ್ನು, ಕಾರಿನ ಮಾಲೀಕ ಟ್ರಕ್ ಚಾಲಕನು ಅತ್ಯಂತ ರಭಸವಾಗಿ ಹಿಂದಿನಿಂದ ಬರುತ್ತಿದ್ದ ಎಂದು ಹೇಳಿದ್ದಾರೆ. ಸದ್ಯ ಕಾರು ಸವಾರರು ನೀಡಿದ ದೂರಿನ ಆಧಾರದ ಮೇಲೆ ಟ್ರಕ್​ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.  

ಇದನ್ನೂ ಓದಿ: ಜ್ಯುವೆಲ್ಲರಿಯಿಂದ 100 ಕೆಜಿ ಚಿನ್ನ, ಬೆಳ್ಳಿ ಆಭರಣ ಕದ್ದೊಯ್ದ ಕಳ್ಳರು! ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.