ಭಾರತ - ದಕ್ಷಿಣ ಆಫ್ರಿಕಾ ಮಧ್ಯೆ 2ನೇ ಟಿ- 20 ಪಂದ್ಯ.. ಟಿಕೆಟ್​ಗಾಗಿ ನೂಕು ನುಗ್ಗಲು, ಪೊಲೀಸರಿಂದ ಲಾಠಿ ಏಟು! - ಒಡಿಶಾದಲ್ಲಿ ಟಿ20 ಪಂದ್ಯ

🎬 Watch Now: Feature Video

thumbnail

By

Published : Jun 11, 2022, 8:15 AM IST

Updated : Feb 3, 2023, 8:23 PM IST

ಕಟಕ್: ಗುರುವಾರ ಕಟಕ್‌ನ ಬಾರಾಬತಿ ಕ್ರೀಡಾಂಗಣದ ಹೊರಗಿನ ಟಿಕೆಟ್ ಕೌಂಟರ್‌ಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾದ ಸ್ಥಿತಿ ಉದ್ಭವಿಸಿತ್ತು. ಜೂನ್ 12 ರಂದು ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಕ್ರಿಕೆಟ್ ಪಂದ್ಯದ ಟಿಕೆಟ್ ಪಡೆಯಲು ನೂರಾರು ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ, ಕೆಲವರು ಲೈನ್ ಮುರಿದು ಟಿಕೆಟ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಮಹಿಳೆಯರಿಗೆ ಮೀಸಲಾದ ಟಿಕೆಟ್ ಕೌಂಟರ್‌ನಲ್ಲಿ ಈ ವಿಷಯ ಉಲ್ಬಣಗೊಂಡಾಗ, ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.