ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವು ರಕ್ಷಣೆ -ವಿಡಿಯೋ - phython rescued in tumkur
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15970733-thumbnail-3x2-yy.jpg)
ತುಮಕೂರು : ಹೊಲದಲ್ಲಿ ಅಳವಡಿಸಿದ್ದ ಬಲೆಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಿಸಿರುವ ಘಟನೆ ನಗರದ ಹೊರವಲಯದ ನರಸಾಪುರ ಗ್ರಾಮದಲ್ಲಿ ನಡೆದಿದೆ. ಹೆಬ್ಬಾವು ಬಲೆಗೆ ಸಿಲುಕಿ ಒದ್ದಾಡುತ್ತಿರುದನ್ನು ಕಂಡ ಮೂರ್ತಿ ಎಂಬುವವರು ವಾರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ಸಂರಕ್ಷಣ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ದಿಲೀಪ್, ರಾಹುಲ್ ಹಾಗೂ ಗುರುಕಿರಣ್ ಬಲೆಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿ ರಾಘವೇಂದ್ರ ಮತ್ತು ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ದೇವರಾಯನದುರ್ಗ ಅರಣ್ಯಕ್ಕೆ ಬಿಡಲಾಗಿದೆ.
Last Updated : Feb 3, 2023, 8:25 PM IST