ಕಾರವಾರದಲ್ಲೊಂದು ಮಕ್ಕಳ ಸಂತೆ: ಗ್ರಾಹಕರ ಖರೀದಿ ಬಲುಜೋರು! - ಕಾರವಾರ ಬೇಸಿಗೆ ಶಿಬಿರ
🎬 Watch Now: Feature Video
ಕಾರವಾರ: ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ವ್ಯಾವಹಾರಿಕ ಜ್ಞಾನ ಬೆಳೆಸುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಗಮನ ಸೆಳೆಯಿತು. ಕಾರವಾರದ ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರ ಮತ್ತು ಜಿನೆಟಿಕ್ ಸ್ಮಾರ್ಟ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಮಕ್ಕಳ ಸಂತೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮನೆಯಿಂದ ಸಿದ್ಧಪಡಿಸಿಕೊಂಡು ಬಂದಿದ್ದ ತಿಂಡಿ-ತಿನಿಸು, ಪಾನೀಯಗಳ ಮಾರಾಟ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದು, ಮಕ್ಕಳು ಖುಷಿಪಟ್ಟರು.
Last Updated : Feb 3, 2023, 8:22 PM IST