ಸಂಭ್ರಮದ ಜೊತೆ ದೈವಭಕ್ತಿಯಿಂದ ನೆರವೇರಿದ ಕುಕ್ಕೆ ಚಂಪಾಷಷ್ಠಿ ಉತ್ಸವ - Panchami Ratha
🎬 Watch Now: Feature Video
ವಿಶ್ವ ಪ್ರಸಿದ್ದ ಯಾತ್ರಾ ಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ ಕಾರ್ಯಕ್ರಮ ಇಂದು ನಡೆಯಿತು. ಇಂದು ಬೆಳಗ್ಗೆ 7.05ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮ ರಥವನ್ನೇರಿದರು. ರಾಜ ಗೋಪುರದ ಬಳಿಯಿಂದ ಹೊರಟ ರಥ ರಾಜಬೀದಿಯಲ್ಲಿ ಸಾಗಿ ಬಂತು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ದೇಶ ವಿದೇಶಗಳಿಂದ ಆಗಮಿಸಿದ ಭಕ್ತಾದಿಗಳು ಬ್ರಹ್ಮರಥೋತ್ಸವವನ್ನು ಕಣ್ತುಂಬಿ ಕೊಂಡರು. ಬ್ರಹ್ಮರಥ ರಾಜಬೀದಿಯಲ್ಲಿ ಆಗಮಿಸುವ ವೇಳೆ ಭಕ್ತರು ತಮ್ಮ ಹರಕೆಗಳನ್ನು ರಥಕ್ಕೆ ಸಮರ್ಪಣೆ ಮಾಡಿದರು. ದೇಗುಲದ ಆಡಳಿತ ಮಂಡಳಿ, ಪೊಲೀಸರು, ಸ್ವಯಂಸೇವಕರು ಈ ಸಮಯದಲ್ಲಿ ಬೇಕಾದ ಮುನ್ನೆಚ್ಚರಿಕೆ ಕೈಗೊಂಡರು.
Last Updated : Feb 3, 2023, 8:34 PM IST