ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಚಾಕುವಿನಿಂದ ಹಲ್ಲೆ
🎬 Watch Now: Feature Video
ನಾಸಿಕ್(ಮಹಾರಾಷ್ಟ್ರ): ಹಣ ಕೇಳಿದ್ದಕ್ಕೆ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಾಸಿಕ್‌ನ ಜೈಲ್ ರೋಡ್ ಪ್ರದೇಶದಲ್ಲಿ ನಡೆದಿದೆ. ವಿಪುಲ್ ಬಾಗುಲ್ ಹಲ್ಲೆಗೊಳಗಾದವರು. ನಿಖಿಲ್ ಮೋರೆ ಹಲ್ಲೆ ಮಾಡಿದ ಆರೋಪಿ. ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಕ್ಕ ಮಾಹಿತಿಯ ಪ್ರಕಾರ, ನಾಸಿಕ್‌ನ ಜೈಲ್ ರೋಡ್ ಪ್ರದೇಶದ ವಿಪುಲ್ ಬಾಗುಲ್ ಎಂಬಾತನ ಮೇಲೆ ಆತನ ಸಂಬಂಧಿ ನಿಖಿಲ್ ಮೋರೆ ಮತ್ತು ಆತನ ಸಹೋದ್ಯೋಗಿಗಳು ಚಾಕುವಿನಿಂದ ಇರಿದಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳು ವಿಪುಲ್ ಬಾಗುಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗಾಯಾಳು ಸಂಬಂಧಿಕರು ಒತ್ತಾಯಿಸಿದ್ದಾರೆ. ಗಾಯಗೊಂಡ ವಿಪುಲ್ ಬಾಗುಲ್ ತನ್ನ ಸಂಬಂಧಿ ನಿಖಿಲ್ ಮೋರೆ ಅವರ ವಾಹನ ಸಾಲದ ಕಂತುಗಳನ್ನು ಪಾವತಿಸಿದ್ದರಂತೆ. ಆ ಹಣ ವಾಪಸ್ ನೀಡುವಂತೆ ವಿಪುಲ್ ನಿಖಿಲ್ ಮೋರೆ ಮತ್ತು ಆತನ ಸಹೋದರಿಗೆ ಕೇಳಿದ್ದರಂತೆ. ಇದೇ ಕಾರಣಕ್ಕೆ ಮೋರೆ ತನ್ನ ಸಹೋದ್ಯೋಗಿಗಳನ್ನು ಕರೆಸಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.