ಕೆಎಂಎಫ್ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ: 40 ಲಕ್ಷ ರೂ ವಹಿವಾಟು ಗುರಿ - ಕೆಎಂಎಫ್ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17255104-thumbnail-3x2-meg.jpg)
ಗಂಗಾವತಿಯ ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೇ.20ರಷ್ಟು ರಿಯಾಯಿತಿ ದರದಲ್ಲಿ ಸಿಹಿ ಉತ್ಪನ್ನಗಳ ಮಾರಾಟದ ನಂದಿನಿ ಸಿಹಿ ಉತ್ಸವಕ್ಕೆ ಕೆಎಂಎಫ್ ನಿರ್ದೇಶಕ ಎಂ. ಸತ್ಯನಾರಾಯಣ ಚಾಲನೆ ನೀಡಿದರು. ರಾಯಚೂರು ಮತ್ತು ಬಳ್ಳಾರಿ ಹಾಲು ಒಕ್ಕೂಟದ ಡೆಪ್ಯುಟಿ ಮ್ಯಾನೇಜರ್ ಚಂದ್ರಶೇಖರ ರೆಡ್ಡಿ ಮಾತನಾಡಿ, ಈ ಬಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಂದ 40 ಲಕ್ಷ ಮೊತ್ತದ ವಹಿವಾಟು ನಡೆಸುವ ಗುರಿ ಇದೆ. ಎರಡು ಜಿಲ್ಲೆಗಳಿಗೆ ಕೊಪ್ಪಳ ಜಿಲ್ಲೆಯ ಬೂದಗುಂಪಾದ ಬಳಿ ಇರುವ ಕೆಎಂಎಫ್ ಉತ್ಪನ್ನದ ಘಟಕದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ನಾಲ್ಕೈದು ದಿನಕ್ಕೆ ಸೀಮಿತವಾಗಿದ್ದ ಸಿಹಿ ಉತ್ಸವ ಈ ಬಾರಿ ಒಂದು ತಿಂಗಳು ಇರಲಿದೆ ಎಂದು ಹೇಳಿದರು.
Last Updated : Feb 3, 2023, 8:36 PM IST