ನಾಯಿ ತಪ್ಪಿಸಲು ಹೋಗಿ ಬೈಕ್ ಪಲ್ಟಿ.. ಸವಾರನ ಜೀವ ಉಳಿಸಿತು ಹೆಲ್ಮೆಟ್! - uttarakannada bike accident
🎬 Watch Now: Feature Video
ಕಾರವಾರ(ಉತ್ತರಕನ್ನಡ): ರಸ್ತೆಗೆ ಅಡ್ಡವಾಗಿ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬೈಕ್ ಸವಾರನೋರ್ವ ಬ್ರೇಕ್ ಹಾಕಿದ್ದು, ನಡು ರಸ್ತೆಯಲ್ಲೇ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಚಿತ್ತಾಕುಲಾ ಗ್ರಾಮದಲ್ಲಿ ನಡೆದಿದೆ. ಚಿತ್ತಾಕುಲ ಬಳಿ ಸ್ವಲ್ಪ ಮಳೆಯಾಗಿತ್ತು. ಎದುರಿಗೆ ಬಂದ ನಾಯಿ ತಪ್ಪಿಸಲು ಹೋಗಿ ಬೈಕ್ಗೆ ಬ್ರೇಕ್ ಹಾಕಿದ್ದು, ಬೈಕ್ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಆಗ ಬೈಕ್ ಸವಾರ ಸ್ವಲ್ಪ ದೂರ ಜಾರಿಕೊಂಡು ಬಿದ್ದಿದ್ದಾರೆ. ತಲೆ ಮೇಲಿದ್ದ ಹೆಲ್ಮೆಟ್ ಆತನ ಪ್ರಾಣಿ ಉಳಿಸಿದೆ. ಸವಾರ ತಾನಾಗಿಯೇ ಎದ್ದು ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಂತರ ತೆರಳಿದ್ದಾರೆ. ಈ ದೃಶ್ಯ ಅಲ್ಲೇ ಹತ್ತಿರದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:24 PM IST