ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ.. ನಾಲ್ವರ ಸಾವು, ಐದು ಜನರಿಗೆ ಗಂಭೀರ ಗಾಯ - Etv Bharat Kannada
🎬 Watch Now: Feature Video
ತಿರುಪತಿ (ಆಂಧ್ರಪ್ರದೇಶ): ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಜನರು ಮೃತಪಟ್ಟಿರುವ ಘಟನೆ ಇಲ್ಲಿಯ ಚಂದ್ರಗಿರಿ ಮಂಡಲದ ಕಲ್ರೋಡ್ಪಲ್ಲಿಯಲ್ಲಿ ಸಂಭವಿಸಿದೆ. ಅನಂತ ತೆಂಬುಕರ್, ಮಯೂರ್ ಮಟನ್, ಋಷಿಕೇಶ ಜಂಗಮ, ಅಜಯ್ ನಂಗನಾಡ್ ಲುಟ್ಟೆ ಮೃತರು. ಒಟ್ಟು ಒಂಬತ್ತು ಜನ ಕಾರಿನಲ್ಲಿ ಪ್ರಾಯಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಇನ್ನೂ 5 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ 9ಜನರು ಸ್ನೇಹಿತರಾಗಿದ್ದು, ಮಹಾರಾಷ್ಟ್ರದ ಸೋಲಾಪುರದವರೆಂದು ತಿಳಿದು ಬಂದಿದೆ. ಇವರು ತಿರುಮಲದಲ್ಲಿ ದೇವರ ದರ್ಶನ ಪಡೆದು ಕಾಣಿಪಾಕಂಗೆ ಹೋಗುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದ ಬಳಿ ಗುಜರಾತ್ ಬಸ್ ಪಲ್ಟಿ: ಜಗಳೂರು ಬಳಿ ಅಪಘಾತದಲ್ಲಿ ಆರು ಜನರಿಗೆ ಗಾಯ