ಬಿಜ್‌ಕಾನ್ ಕಾನ್ಕ್ಲೇವ್ ಕಾರ್ಯಕ್ರಮ.. ಚಿತ್ರ ನಟಿ ಪ್ರಾಚಿ ದೇಸಾಯಿ ಭಾಗಿ

🎬 Watch Now: Feature Video

thumbnail

By

Published : Feb 6, 2023, 4:31 PM IST

Updated : Feb 14, 2023, 11:34 AM IST

ಡೆಹ್ರಾಡೂನ್: ಟೆಲಿವಿಷನ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಪ್ರಾಚಿ ದೇಸಾಯಿ ಅವರು ಬಿಝ್‌ಕಾನ್ ಇಂಡಿಯಾ 2023 ಕಾನ್ಕ್ಲೇವ್‌ನಲ್ಲಿ ಪಾಲ್ಗೊಳ್ಳಲು ಡೆಹ್ರಾಡೂನ್ ತಲುಪಿದ್ದಾರೆ. ಈ ಸಂದರ್ಭದಲ್ಲಿ, ಅವರು ISBT ಯಲ್ಲಿರುವ ಹೋಟೆಲ್‌ನಲ್ಲಿ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತರಾಖಂಡದ ಉದ್ಯಮಿಗಳಿಗೆ ಬಿಜ್​​ಕಾನ್​ ಪ್ರಶಸ್ತಿ  ನೀಡಿದರು.  ಈ ವೇಳೆ ಪ್ರಶಸ್ತಿ ಸ್ವೀಕರಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪ್ರಾಚಿ ದೇಸಾಯಿ ಅವರಿಗೆ ಡೆಹ್ರಾಡೂನ್‌ ಬಗ್ಗೆ ಒಲವು: ಬಿಸಿನೆಸ್ ಕಾನ್‌ಕ್ಲೇವ್‌ನ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ಅನೇಕ ಸ್ಟಾರ್ಟಪ್‌ಗಳಿವೆ ಎಂದು ಹೇಳಿದರು. ಹೊಸ ಹೊಸ ವ್ಯಕ್ತಿಗಳು ತಮ್ಮ ಸಾಕಷ್ಟು ಆಲೋಚನೆಗಳನ್ನು ಜಗತ್ತಿಗೆ ಪರಿಚಯಿಸಲು ಬಯಸುತ್ತಾರೆ. ಅಂತಹವರಿಗೆ ಇದು ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ. 

ಡೆಹ್ರಾಡೂನ್‌ನ ಹವಾಮಾನ ವಿಶೇಷ: ಉತ್ತರಾಖಂಡಕ್ಕೆ ಬರುವುದು ಪ್ರವಾಸಿಗರಿಗೆ ಮಾತ್ರವಲ್ಲದೇ ಚಿತ್ರರಂಗಕ್ಕೆ ಸಂಬಂಧಿಸಿದ ಜನರಿಗೆ ಉತ್ತೇಜನ ಮತ್ತು ಬೆಂಬಲ ನೀಡುತ್ತದೆ ಎಂದು ಪ್ರಾಚಿ ದೇಸಾಯಿ ಹೇಳಿದರು. ಇಂತಹ ಕಾರ್ಯಕ್ರಮಗಳನ್ನು ವರ್ಷಕ್ಕೆ ಒಂದಲ್ಲ ಎರಡು - ಮೂರು ಬಾರಿ ನಡೆಸಬೇಕು. ಇಲ್ಲಿನ ಶಾಂತ ಕಣಿವೆಗಳು ತುಂಬಾ ಸುಂದರವಾಗಿವೆ. ಇಲ್ಲಿ ಸಿಗುವ ಶಾಂತಿ, ದೊಡ್ಡ ನಗರಗಳಲ್ಲಿ ಸಿಗುವುದಿಲ್ಲ. ಡೆಹ್ರಾಡೂನ್‌ನ ಹವಾಮಾನವು ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ. 

ಪ್ರಾಚಿ ದೇಸಾಯಿ ಅವರು ಅಭಿನಯಿಸಿರುವ ಚಿತ್ರಗಳು:  ನಟಿ ಪ್ರಾಚಿ ದೇಸಾಯಿ ಅವರು 'ರಾಕ್ ಆನ್', 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ', 'ಬೋಲ್ ಬಚ್ಚನ್', 'ಫೊರೆನ್ಸಿಕ್' ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ಅವರ ಅಭಿನಯವು ಹೆಚ್ಚು ಮೆಚ್ಚುಗೆ ಪಡೆದಿದೆ. ಅವರು ಭಾರತೀಯ ಸೋಪ್ ಒಪೆರಾ ಕಸಮ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರಿಂದ ಅವರು ಸಾಕಷ್ಟು ಖ್ಯಾತಿ ಗಳಿಸಿದರು.

ಇದನ್ನೂ ಓದಿ : ಗ್ರ್ಯಾಮಿ ಪ್ರದಾನ: 32ನೇ ಪ್ರಶಸ್ತಿ ಗೆದ್ದ ಗಾಯಕಿ ಬೆಯಾನ್ಸ್ ದಾಖಲೆ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.