ರಾಯಚೂರು: ನಡು ರಸ್ತೆ ಮೇಲೆ ಧಗಧಗನೆ ಹೊತ್ತಿ ಉರಿದ ಕಾರು - ರಾಯಚೂರು ಗ್ರಾಮೀಣ ಠಾಣೆ
🎬 Watch Now: Feature Video
ರಾಯಚೂರು: ನಗರದ ಹೊರವಲಯದ ಚಂದ್ರಬಂಡಾ ರಸ್ತೆಯ ಹೊಸ ಆಶ್ರಯ ಕಾಲೋನಿ ಸಮೀಪ ದಿಢೀರ್ ಬೆಂಕಿ ಕಾಣಿಸಿಕೊಂಡು ಕಾರೊಂದು ಧಗ ಧಗನೆ ಹೊತ್ತಿ ಉರಿಯಿತು. ಚಂದ್ರಬಂಡಾ ಗ್ರಾಮದಿಂದ ರಾಯಚೂರು ಮಾರ್ಗವಾಗಿ ನಾಲ್ವರು ಕಾರಿನಲ್ಲಿ ಬರುತ್ತಿದ್ದಾಗ ಸುಟ್ಟ ವಾಸನೆ ಬಂದಿದೆ. ಕೂಡಲೇ ಕಾರಿನಿಂದ ಇಳಿದು ಬೇರೆ ವಾಹನದಲ್ಲಿ ತೆರಳಿದ್ದಾರೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Last Updated : Feb 3, 2023, 8:33 PM IST