ತನ್ನ ಆಸೆಯಂತೆ ಬುಲ್ಡೋಜರ್ ಏರಿ ಮದುವೆ ಮನೆಗೆ ಬಂದ ಇಂಜಿನಿಯರ್! - ಬುಲ್ಡೋಜರ್ ಏರಿ ವಧುವಿನ ಮನೆಗೆ ಬರಾತ್ ಕೊಂಡೊಯ್ದ ವರ
🎬 Watch Now: Feature Video

ಮಧ್ಯಪ್ರದೇಶ ಬೆತುಲ್ ಜಿಲ್ಲೆಯಲ್ಲಿ ವಧು ಟ್ರ್ಯಾಕ್ಟರ್ ಓಡಿಸಿ ಮದುವೆ ಹಾಲ್ಗೆ ಬಂದ್ ಘಟನೆ ಭಾರಿ ಚರ್ಚೆಗೊಳಗಾಗಿತ್ತು. ಇದೀಗ ವೃತ್ತಿಯಲ್ಲಿ ಸಬ್ ಇಂಜಿನಿಯರ್ ಒಬ್ಬರು ಕುದರೆ ಬದಲು ಬುಲ್ಡೋಜರ್ ಮೇಲೆ ಬರಾತ್ ಮೆರವಣಿಗೆ ವಧು ಮನೆಗೆ ತೆಗೆದುಕೊಂಡು ಹೋಗುವ ಮೂಲಕ ಸುದ್ದಿಯಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ಕುರವರ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಸಬ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಕುರ್ ಜೈಸ್ವಾಲ್ ವಿವಾಹ ಪಧಾರ್‌ನಲ್ಲಿ ನಿಶ್ಚಯಿಸಲಾಗಿತ್ತು, ಮೊನ್ನೆ ರಾತ್ರಿ ವರ ಅಂಕುರ್ ಜೈಸ್ವಾಲ್ ತಮ್ಮ ಸ್ವಗ್ರಾಮವಾದ ಕೆರ್ಪಾನಿಯಿಂದ ಪಧಾರ್ಗೆ ತೆರಳಿತ್ತು. ಅಲ್ಲಿ ವರ ಅಂಕುರ್ ಬೇಡಿಕೆಯನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. ರಾಜನ ರೀತಿ ಕುದುರೆ ಮೆರವಣಿಗೆ ಮಾಡುವ ಬದಲು ಬುಲ್ಡೋಜರ್ ಮೇಲೆ ಕುಳಿತುಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದರು. ಆಗ ಬುಲ್ಡೋಜರ್ ವ್ಯವಸ್ಥೆ ಮಾಡಲಾಗಿದ್ದು, ವರ ಅಂಕುರ್ ತಮ್ಮ ಬರಾತ್ ಮೆರವಣಿಗೆಯನ್ನು ವಧು ಮನೆಗೆ ಕೊಂಡೊಯ್ದರು. ಈ ವೇಳೆ ಎಲ್ಲರೂ ಡಿಜೆ ಹಾಡಿಗೆ ಸಖತ್ ಕುಣಿದು.ಕುಪ್ಪಳಿಸಿದರು.
Last Updated : Feb 3, 2023, 8:24 PM IST