ಆಂಜನೇಯಗೆ ಬೆಳ್ಳಿಯ ನವರತ್ನಯುಕ್ತ ಗದೆ ಸಮರ್ಪಣೆ ಮಾಡಿದ ಅಮಿತ್​ ಶಾ - ಆಂಜನೇಯಗೆ ಬೆಳ್ಳಿಯ ನವರತ್ನಯುಕ್ತ ಗದೆ ಸಮರ್ಪಣೆ

🎬 Watch Now: Feature Video

thumbnail

By

Published : Feb 11, 2023, 9:07 PM IST

Updated : Feb 14, 2023, 11:34 AM IST

ದಕ್ಷಿಣ ಕನ್ನಡ: ಇಲ್ಲಿಯ ಈಶ್ವರಮಂಗಲದ ಹನುಮಗಿರಿಯ ಸುಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆಂಜನೇಯ ದೇವರಿಗೆ ನವರತ್ನ ಖಚಿತ ಬೆಳ್ಳಿಯ ಗದೆಯನ್ನು ಸಮರ್ಪಣೆ ಮಾಡಿದರು. ಬಳಿಕ ಅರ್ಚಕರು ಶಾ ಅವರಿಗೆ ರಕ್ಷೆ ಕಟ್ಟಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದರಾದ ನಳೀನ್ ಕುಮಾರ್ ಕಟೀಲ್​ ಧರ್ಮಶ್ರೀ ಪ್ರತಿಷ್ಠಾನದ ಪ್ರಮುಖರು, ಇತರರು ಉಪಸ್ಥಿತರಿದ್ದರು.

ಇನ್ನು ಅಮರಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭಾರತಿ ಅಮರಜ್ಯೋತಿ ಮಂದಿರ ಥೀಮ್ ಪಾರ್ಕ್​ನ್ನು‌ ಅಮಿತ್ ಶಾ ಅವರು ಲೋಕಾರ್ಪಣೆ ಮಾಡಿ‌ದರು. ಬಳಿಕ ಭಾರತ ಮಾತೆಗೆ, ಸೈನಿಕರಿಗೆ ಪುಷ್ಪಾರ್ಚನೆ ಮಾಡಿ ಸಂದರ್ಶಕರ ಪುಸ್ತಕದಲ್ಲಿ‌ ಅಮರಗಿರಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆದರು.

ಇದನ್ನೂ ಓದಿ: ಮಂಗಳೂರಲ್ಲಿ ಅಮಿತ್ ಶಾ ರೋಡ್​ ಶೋ : ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ ಸಚಿವರು

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.