10 ದಿನಗಳವರೆಗೆ ನಡೆದ ಶ್ರೀ ಆಂಡಾಳಮ್ಮ ಉತ್ಸವಕ್ಕೆ ತೆರೆ... ದೇವಿಯ ರಥೋತ್ಸವದಲ್ಲಿ ಭಾಗಿಯಾದ ಸಹಸ್ರಾರು ಭಕ್ತರು!
🎬 Watch Now: Feature Video
ತಮಿಳುನಾಡಿನ ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತೂರ್ ದೇವಸ್ಥಾನದ ಆದಿ ಪೂರಂ ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಈ ಹಬ್ಬವು ದೇವಾಲಯದ ಮುಖ್ಯ ದೇವಿಯಾದ ಆಂಡಾಳಮ್ಮನ ಜನ್ಮದಿನ ಪ್ರಯುಕ್ತವಾಗಿ ಆಚರಿಸಲಾಗುತ್ತದೆ. ಶ್ರೀ ಆಂಡಾಳ್ ದೇವಸ್ಥಾನದಲ್ಲಿ ತಿರುಆದಿಪುರ ಉತ್ಸವವು ಜುಲೈ 24 ರಂದ ಪ್ರಾರಂಭವಾಗಿತ್ತು. ಈ ಹಬ್ಬವು 10 ದಿನಗಳವರೆಗೆ ನಡೆಯುತ್ತದೆ. ಮುಖ್ಯ ಕಾರ್ಯಕ್ರಮವಾದ ತಿರುಆದಿಪುರ ರಥೋತ್ಸವ ಆಗಸ್ಟ್ 1 ರಂದು ನಡೆದಿದ್ದು, ಈ ತಿರುಆದಿಪುರ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ತಾಯಿಯ ಆಶೀರ್ವಾದ ಪಡೆದರು.
Last Updated : Feb 3, 2023, 8:25 PM IST