ಪೊಲೀಸ್ ಬ್ಯಾಂಡ್ನಲ್ಲಿ ಸಖತ್ ಆಗಿ ಮೂಡಿ ಬಂದ ಪುಷ್ಪ ಚಿತ್ರದ ‘ಶ್ರೀವಲ್ಲಿ’ ಹಾಡು! - ಅಲ್ಲು ಅರ್ಜುನ್ ಚಿತ್ರದ ಪುಷ್ಪ ಹಾಡು
🎬 Watch Now: Feature Video
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ‘ಶ್ರೀವಲ್ಲಿ’ ಹಾಡು ಎಲ್ಲೆಡೆ ಜನಪ್ರಿಯವಾಗಿದೆ. ಈ ಹಾಡು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮನಸೆಳೆದಿದೆ. ಈಗ ಈ ಹಾಡು ಮಹಾರಾಷ್ಟ್ರದ ಮುಂಬೈ ಪೊಲೀಸ್ ವಲಯದಲ್ಲಿ ಕೇಳಿ ಬಂದಿದೆ. ಹೌದು, ಮುಂಬೈ ಪೊಲೀಸ್ ತಂಡ ಬ್ಯಾಂಡ್ ಮೂಲಕ ಪುಷ್ಪ ಚಿತ್ರದ ಜನಪ್ರಿಯ ಶ್ರೀವಲ್ಲಿ ಹಾಡನ್ನು ಪ್ರದರ್ಶಿಸಿತು. ಬಳಿಕ ಈ ಹಾಡಿನ ವಿಡಿಯೋವನ್ನು ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿ ‘ಮುಂಬೈ ಪೊಲೀಸರ ಸಂಗೀತ ಪಯಣ ಎಂದಿಗೂ ನಿಲ್ಲುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ. ಶ್ರೀವಲ್ಲಿ ಹಾಡಿನ ಬ್ಯಾಂಡ್ ಆವೃತ್ತಿಯನ್ನು ಡ್ರಮ್ಸ್, ಸ್ಯಾಕ್ಸೋಫೋನ್, ಕೊಳಲು ಮತ್ತು ಇತರ ಅನೇಕ ವಾದ್ಯಗಳೊಂದಿಗೆ ಸಂಯೋಜಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:20 PM IST