'ಇನ್ಮುಂದೆ ನಾವು ಮಿಸ್ಟರ್ & ಮಿಸೆಸ್ ಸಿಂಹ' ಎಂದ ನಟಿ ಹರಿಪ್ರಿಯಾ - vasishta simha haripriya wedding photo
🎬 Watch Now: Feature Video
ಕನ್ನಡ ಚಿತ್ರರಂಗದ ಕ್ಯೂಟ್ ಸ್ಟಾರ್ ಜೋಡಿ ಎಂದರೆ ಅದೀಗ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ. ಎರಡು ದಿನದ ಹಿಂದಷ್ಟೇ ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹಸೆಮಣೆ ಏರುವ ಮೂಲಕ ತಮ್ಮ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಇದೀಗ ಈ ನವ ದಂಪತಿ ತಮ್ಮ ಮದುವೆಯ ಸುಂದರ ಕ್ಷಣಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಜನರಿಗೆ 26ರಂದು ನಡೆದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರ ಮದುವೆಗೆ ನಟ ಶಿವ ರಾಜ್ಕುಮಾರ್, ನಟ ಡಾಲಿ ಧನಂಜಯ್, ಡಾರ್ಲಿಂಗ್ ಕೃಷ್ಣ ದಪಂತಿ, ನಟಿ ಅಮೃತಾ ಅಯ್ಯಂಗಾರ್ ಸೇರಿದಂತೆ ಸಾಕಷ್ಟು ರಾಜಕೀಯ ಗಣ್ಯರು ಆಗಮಿಸಿ ಈ ಜೋಡಿಗೆ ಶುಭಾ ಹಾರೈಸಿದರು. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಅವರು ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಮದುವೆಯ ಸಂಭ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಬಹಳ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಮದುವೆಯ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ತಮ್ಮ ಮದುವೆಯ ಸುಂದರ ವಿಡಿಯೋವನ್ನು ನಟಿ ಹರಿಪ್ರಿಯಾ ಹಂಚಿಕೊಂಡು ಇನ್ಮುಂದೆ ನಾವು ಮಿಸ್ಟರ್ ಅಂಡ್ ಮಿಸೆಸ್ ಸಿಂಹ ಅಂತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹರಿಪ್ರಿಯಾ - ವಸಿಷ್ಠ ಸಿಂಹ ವಿವಾಹದ ಸುಂದರ ಕ್ಷಣಗಳು