ಆ್ಯಕ್ಷನ್ ಸ್ಟಾರ್ ಆಗಿ ಒಂದು ಯುಗವನ್ನೇ ಸೃಷ್ಟಿಸಲಿದ್ದಾರೆ: ಎಸ್​ಆರ್​ಕೆ ಬಗ್ಗೆ ಸಿದ್ಧಾರ್ಥ್ ಆನಂದ್ ಗುಣಗಾನ - ಶಾರುಖ್ ಬಗ್ಗೆ ಸಿದ್ಧಾರ್ಥ್ ಆನಂದ್ ಹೇಳಿಕೆ

🎬 Watch Now: Feature Video

thumbnail

By

Published : Feb 4, 2023, 3:18 PM IST

Updated : Feb 6, 2023, 4:07 PM IST

ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ನಟನೆಯ ಪಠಾಣ್​ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ 700 ಕೋಟಿ ಕಲೆಕ್ಷನ್ ಮಾಡಿರುವ ಪಠಾಣ್​ ಚಿತ್ರ ದಾಖಲೆಗಳನ್ನು ನಾಶ ಮಾಡಿದೆ. ತಮ್ಮ ಚಿತ್ರದ ಅದ್ಭುತ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ನಟ ಶಾರುಖ್ ಖಾನ್​​​ ಬಗ್ಗೆ ಗುಣಗಾನ ಮಾಡಿದ್ದಾರೆ.

ರೊಮ್ಯಾಂಟಿಕ್ ಹೀರೋ ಎಂದೇ ಜನಪ್ರಿಯರಾಗಿರುವ ನಟ ಶಾರುಖ್​ ಖಾನ್​​ ಈಗಷ್ಟೇ ಹೊಸದನ್ನು ಶುರು ಮಾಡಿದ್ದಾರೆ. ಇದು ಕೇವಲ ಆರಂಭ, ಆ್ಯಕ್ಷನ್ ಸ್ಟಾರ್ ಆಗಿ ಯುಗವನ್ನೇ ಸೃಷ್ಟಿಸಲಿದ್ದಾರೆ. ಅವರಿಗೆ 57 ವರ್ಷವಾಯಿತು ಎಂದು ಯಾರಾದರೂ ಹೇಳಿದರಷ್ಟೇ ಗೊತ್ತಾಗಬಹುದು. ವಯಸ್ಸು ಕೇವಲ ಒಂದು ನಂಬರ್​​. ಎಸ್​ಆರ್​​ಕೆ ಅವರಿಗಿರುವ ಆ ಉತ್ಸಾಹ, ಎನರ್ಜಿ ಬಹುಶಃ ಯಾರಿಗೂ ಇರಲು ಸಾಧ್ಯವಿಲ್ಲ ಎಂದು ಸಿದ್ಧಾರ್ಥ್ ಆನಂದ್​ ಅವರು ಬಾಲಿವುಡ್​ ಕಿಂಗ್​ ಖಾನ್​ ಬಗ್ಗೆ ಗುಣಗಾನ ಮಾಡಿದ್ದಾರೆ.  

ಸಿದ್ಧಾರ್ಥ್ ಆನಂದ್​ ಅವರ ಆ್ಯಕ್ಷನ್​ ಚಿತ್ರಗಳಾದ ವಾರ್ ಮತ್ತು ಬ್ಯಾಂಗ್ ಬ್ಯಾಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸಿದ್ದರೆ, ಪಠಾಣ್‌ನಲ್ಲಿ ದೇಶದ ಬಹುದೊಡ್ಡ ಸೂಪರ್‌ಸ್ಟಾರ್‌ಗಳು ಕಾಣಿಸಿಕೊಂಡಿದ್ದಾರೆ. ಸಲ್ಮಾನ್​ ಖಾನ್ ಪಠಾಣ್‌ನ ಭಾಗವಾಗಿರುವ ಬಗ್ಗೆ ಮಾತನಾಡುತ್ತಾ, ಇಬ್ಬರೂ ಖಾನ್‌ಗಳನ್ನು ಒಂದೇ ತೆರೆ ಮೇಲೆ ತಂದ ಕೀರ್ತಿ ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.  

ಇದನ್ನೂ ಓದಿ: 'ಪಠಾಣ್​ ಬಿಡಿ, ಆ್ಯಕ್ಷನ್​ ಹೀರೋ ಸಿನಿಮಾ ನೋಡಿ' ಎಂದ ಅಭಿಮಾನಿಗೆ ಆಯುಷ್ಮಾನ್ ಖುರಾನ ಹೀಗಂದ್ರು!

Last Updated : Feb 6, 2023, 4:07 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.