'ಅಪ್ಪು ಅಪ್ಪುಗೆಯಿಂದ ಅದೃಷ್ಟವಂತನಾದೆ' - ಕ್ರೇಜಿಸ್ಟಾರ್ ರವಿಚಂದ್ರನ್ - ಕ್ರೇಜಿಸ್ಟಾರ್ ರವಿಚಂದ್ರನ್

🎬 Watch Now: Feature Video

thumbnail

By

Published : Oct 22, 2022, 10:27 AM IST

Updated : Feb 3, 2023, 8:29 PM IST

ಗಂಧದ ಗುಡಿ ಪ್ರೀ ರಿಲೀಸ್​ ಈವೆಂಟ್ ಶುಕ್ರವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಗಂಧದ ಗುಡಿ, ಪುನೀತ್​ ರಾಜ್​ಕುಮಾರ್​, ದೊಡ್ಮನೆ ಬಗ್ಗೆ ಗುಣಗಾನ ಮಾಡಿದರು. ಪುನೀತ ಪರ್ವ ಕೇವಲ ಸಂಭ್ರಮ ಅಲ್ಲ, ಇದು ಮಹಾ ಸಂಗಮ. ಮನುಷ್ಯ ಸಂಪಾದನೆ ಮಾಡಬೇಕಾಗಿರುವುದು ಇದನ್ನೇ (ಅಭಿಮಾನಿ ಬಳಗ). ಇಲ್ಲಿ ಸೇರಿರುವ ಜನತೆ ಅಪ್ಪು ಮೇಲಿನ ಪ್ರೀತಿಗೆ ಸಾಕ್ಷಿ. ಡಾ. ರಾಜ್​ಕುಮಾರ್​ ಅಪ್ಪುಗೆಯಿಂದ ನಾನೊಬ್ಬ ಕಲಾವಿದನಾದೆ, ಅಪ್ಪು ಅಪ್ಪುಗೆಯಿಂದ ನಾನೊಬ್ಬ ಅದೃಷ್ಟವಂತನಾದೆ. ಗಂಧದ ಗುಡಿ ಅಂದ್ರೆ, ಅದು ನಮ್ಮ ಕರ್ನಾಟಕ, ಅದು ನಮ್ಮ ರಾಜ್​ಕುಮಾರ್​, ಶಿವ ರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​. ಗಂಧದ ಗುಡಿ ಅಂದ್ರೆ ನಮ್ಮ ಗರ್ವ, ಸಂಪತ್ತು, ಖುಷಿ. ಗಂಧದ ಗುಡಿ ಪುನೀತ್​ ಅವರು ಹೀರೋ ಆಗಿ ಮಾಡಿರುವ ಸಿನಿಮಾ ಅಲ್ಲ, ಒಬ್ಬ ಜವಾಬ್ದಾರಿಯುತನಾಗಿ ಮಾಡಿರುವ ಸಿನಿಮಾ. ಆ ಜವಾಬ್ದಾರಿ ನಿಮ್ಮಲ್ಲೂ ಇದ್ರೆ ಗಂಧದ ಗುಡಿ ನೋಡಿ ಗೆಲ್ಲಿಸಿ ಎಂದರು.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.