ಲಂಡನ್: ಬೆಳಗ್ಗೆ ಎದ್ದಾಕ್ಷಣ ಸೇವಿಸುವ ಎಸ್ಪ್ರೆಸೊ ಕಾಫಿಗಳು ಕೇವಲ ನಿಮ್ಮನ್ನು ಎಚ್ಚರಿಸುವುದಿಲ್ಲ. ಅದಕ್ಕಿಂತ ಮೀರಿದ ಪ್ರಯೋಜನವನ್ನು ನೀಡುತ್ತದೆ. ಅದರಲ್ಲೂ ಮರೆವಿನ ಸಮಸ್ಯೆ ತಡೆಗಟ್ಟುವಲ್ಲಿ ಈ ಕಾಫಿ ಪ್ರಮುಖವಾಗಿದೆ ಎಂದು ಇಟಲಿಯನ್ ಸಂಶೋಧಕರು ತಿಳಿಸಿದ್ದಾರೆ. ಈ ಸಂಬಂಧ ಅವರು ಪ್ರಯೋಗಾಲಯದ ಅಧ್ಯಯನ ನಡೆಸಿದ್ದಾರೆ. ನರಸಂಬಂಧಿ ಸಮಸ್ಯೆಗಳ ವಿರುದ್ಧ ಇದು ಜೈವಿಕ ಸಕ್ರಿಯ ಅಂಶವಾಗಿ ವರ್ತಿಸುವ ಸಂಬಂಧ ಈ ಅಧ್ಯಯನವನ್ನು ಅವರು ರೂಪಿಸಿದ್ದಾರೆ.
ಎಸಿಎಸ್ ಜರ್ನಲ್ ಆಫ್ ಅಗ್ರಿಕಲ್ಚರ್ ಮತ್ತು ಫುಡ್ ಕೆಮಿಸ್ಟ್ರಿಯಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಇದರಲ್ಲಿ ಪ್ರಾಥಮಿಕವಾಗಿ ವಿಟ್ರೊ ಲ್ಯಾಬೋರೆಟರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಎಸ್ಪ್ರೆಸೊ ಸಂಯುಕ್ತಗಳು ಟೌ ಪ್ರೊಟೀನ್ ಒಟ್ಟು ಗೂಡಿಸುವಿಕೆ ತಡೆಯಬಹುದು. ಈ ಪ್ರಕ್ರಿಯೆಯನ್ನು ಆಲ್ಜಮೈರ್ ರೋಗದ ಆಕ್ರಮಣದಲ್ಲಿ ತೊಡಗಿದೆ ಎಂಬ ನಂಬಿಕೆ ಇದೆ.
ಅಲ್ಝಮೈರ್ ಸಮಸ್ಯೆ ಸೇರಿದಂತೆ ಕೆಲವು ನರ ಸಂಬಂಧಿತ ರೋಗದಲ್ಲಿ ಕಾಫಿಯು ಪ್ರಯೋಜನಕಾರಿ ಪರಿಣಾಮ ಹೊಂದಿದೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ಆದಾಗ್ಯೂ ಇದರ ಹಿಂದಿರುವ ಸರಿಯಾದ ಪರಿಸ್ಥಿತಿಗಳು ಇನ್ನು ಅಸ್ಪಷ್ಟವಾಗಿದೆ. ಇದರಲ್ಲಿನ ಟೌ ಪ್ರೊಟೀನ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ.
ಟೌ ಪ್ರೋಟಿನ್ ಪಾತ್ರ: ಆರೋಗ್ಯಯುತ ಜನರಲ್ಲಿ ಟೌ ಪ್ರೋಟಿನ್ ಮಿದುಳಿನ ವಿನ್ಯಾಸವನ್ನು ಸ್ಥಿರವಾಗಿ ರೂಪಿಸುತ್ತದೆ. ಆದರೆ, ಕೆಲವು ರೋಗಗಳು ಅಭಿವೃದ್ಧಿ ಹೊಂದಿದರೆ, ಈ ಟೌ ಪ್ರೋಟಿನ್ಗಳು ಇವು ಫಿಬ್ರಿಲ್ಸ್ ಜೊತೆ ಇದು ಒಟ್ಟುಗೂಡುತ್ತದೆ. ಕೆಲವು ಸಂಶೋಧಕರು ಈ ಒಟ್ಟುಗೂಡುವಿಕೆ ಲಕ್ಷಣಗಳನ್ನು ನಿವಾರಿಸುವುದರಿಂದ ರೋಗ ಲಕ್ಷಣಗಳನ್ನು ನಿವಾರಣೆ ಮಾಡುತ್ತದೆ ಎಂದು ಕೆಲವು ಸಂಶೋಧಕರು ಪ್ರಸ್ತಾಪಿಸುತ್ತಾರೆ.
ಇಟಲಿಯ ವೆರಿನಾ ಯುನಿವರ್ಸಿಟಿಯ ಬಯೋಟೆಕ್ನಾಲಾಜಿ ವಿಭಾಗದ ಮರಿಯಪಿನ ಡಿ ಒನೊಫ್ರಿಯೊ ಮತ್ತು ಅವರ ಸಹೋದ್ಯೋಗಿಗಳು, ಈ ಎಸ್ಪ್ರೆಸೊದಲ್ಲಿರುವ ಈ ಸಂಯುಕ್ತಗಳು ಟೌ ಒಟ್ಟುಗೂಡುವಿಕೆಯನ್ನು ತಡೆಯುತ್ತದೆಯಾ ಎಂಬುದನ್ನು ನೋಡ ಬಯಸಿದ್ದರು. ಸಂಶೋಧಕರು, ಶೇಖರಿಸಿದ ಕಾಫಿ ಬೀಜಗಳಿಂದ ಎಸ್ಪ್ರೆಸೊ ತಯಾರಿಸಿ, ಬಳಿಕ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸಿನನ್ಸ್ ಸೆಪೆಕ್ರೊಸಕಾಪಿ ರಾಸಾಯನಿಕವನ್ನು ಅದರಲ್ಲಿ ಸೇರಿಸಿದರು
ಇದೇ ವೇಳೆ, ಅವರು ಕೆಫೆನ್ ಮತ್ತು ತ್ರಿಗೊನೆಲ್ಲೈನ್ ಮತ್ತು ಎರಡು ಅಲ್ಕಾಲೈಡ್, ಹಿನೆಸ್ಟೈನ್ ಮತ್ತು ಥಿಯೊಬ್ರೊಮೈನ್ ಜೊತೆಗೆ ಚಾಕೋಲೆಟ್ ಸಂಯುಕ್ತಗಳನ್ನು ಕಾಫಿಗೆ ಸೇರಿಸುವ ಮೂಲಕ ಮುಂದಿನ ಪ್ರಯೋಗದತ್ತ ಗಮನ ಹರಿಸಿದರು. ಮೊಲೆಕ್ಯೂಲೆಸ್ ಕೊತೆಗೆ ಸಂಪೂರ್ಣ ಎಸ್ಪ್ರೆಸೊದಲ್ಲಿ ಟೌ ಪ್ರೋಟೀನ್‌ನ ಸಂಕ್ಷಿಪ್ತ ರೂಪದೊಂದಿಗೆ 40 ಗಂಟೆಗಳವರೆಗೆ ಬಿಸಿ ಮಾಡಲಾಯಿತು. ಈ ವೇಳೆ ಕಡಿಮೆಯ ಫಿಬ್ರಿಲ್ಸ್ ಕೋಶಗಳು ಚಿಕ್ಕದಾಗಿದ್ದು ವಿಷ ಪೂರಿತವಾಗಿಲ್ಲ ಎಂಬುದು ಪತ್ತೆಯಾಗಿದೆ. ಮುಂದಿನ ಒಟ್ಟುಗೂಡಿಸುವಲ್ಲಿ ಬೀಜಗಳು ಕಾರ್ಯ ನಿರ್ವಹಣೆ ಮಾಡಿಲ್ಲ.
ಮುಂದಿನ ಪ್ರಯೋದಲ್ಲಿ ಸಂಶೋಧಕರು ಕೆಫೆನ್ ಮತ್ತು ಎಸ್ಪ್ರೆಸೊ ಎಕ್ಸ್ಟಾಕ್ಟ್ ಮಿಶ್ರಣವನ್ನು ಟೋ ಫೈಬ್ರಿಲ್ಸ್ ಜೊತೆಗೆ ಸೇರಿಸಿದರು. ಈ ಸಂಬಂಧ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ಎಂದು ತಂಡ ತಿಳಿಸಿದೆ.
ಇದನ್ನೂ ಓದಿ: ಪಾರ್ಕಿನ್ಸನ್ ಕಾಯಿಲೆ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ ಇದು!