ಇಂದು ಬಹುತೇಕ ಮಂದಿ ಯೋಗವನ್ನು ಖುಷಿಯಿಂದ ಮಾಡುತ್ತಾರೆ. ಯೋಗ ಕೇವಲ ವರ್ಕ್ಔಟ್ ಆಗಿರದೇ, ಸಂಭ್ರಮದ ಕ್ಷಣವೂ ಆಗಿದೆ. ಈ ಯೋಗಾಸಾನಗಳು ನಿಮ್ಮನ್ನು ಬಹಳ ಮೋಡಿ ಮಾಡುವಂತೆ ಮಾಡುತ್ತವೆ. ಒತ್ತಡ ಜೀವನ ಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮಾನಸಿಕ ಆರೋಗ್ಯವೂ ಅತಿ ಮುಖ್ಯವಾಗಿರುವ ಹಿನ್ನೆಲೆ ಅನೇಕ ಮಂದಿ ಮನೆಯಲ್ಲೇ ಕುಳಿತು ಯೋಗಾಸಾನ ಕಲಿಯಲು ಪ್ರಾರಂಭಿಸುತ್ತಾರೆ. ಅಂತವರಿಗೆ ಇವರು ಶಿಕ್ಷಕರು ಎಂದರೆ ತಪ್ಪಾಗಲಾರದು. ಸಾಮಾಜಿಕ ಜಾಲತಾಣದಲ್ಲಿ ಭಾರತದ ಹಲವು ಯೋಗ ಇನ್ಫ್ಲುಯೆನ್ಸರ್ಗಳಿಂದ ಅವರಿಂದ ನಿಮ್ಮ ಫಿಟ್ನೆಸ್ ಪ್ರಯಣವನ್ನು ಮತ್ತಷ್ಟು ಪ್ರಭಾವಶಾಲಿಯಾಗಿ ಮಾಡಿಕೊಳ್ಳಬಹುದು
ರಾಧಿಕಾ ಬೋಸ್ (555ಕೆ ಬೆಂಬಲಿಗರು): ಯೋಗಪಟು ಮಾತ್ರವಾಗಿರದ ರಾಧಿಕಾ ಬೋಸ್, ಟ್ರಾವೆಲರ್, ಫಿಟ್ನೆಸ್ ಮತ್ತು ಲೈಫ್ಸ್ಟೈಲಿಶ್ ಕೂಡ ಹೌದು. ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ಇವರು ಇನ್ಸ್ಟಾಗ್ರಾಂನಲ್ಲಿ 555ಕೆ ಅಂದರೆ ಬೆಂಬಲಿಗರನ್ನು ಹೊಂದಿದ್ದಾರೆ. ಆಕೆಯ ತಾಯಿಗೆ ಡಿಸ್ಕ್ ಸ್ಲಿಪ್ ಆದಾಗ ವೈದ್ಯರು ಯೋಗಾಭ್ಯಾಸ ಮಾಡುವಂತೆ ತಿಳಿಸಿದರು.
ಇದು ಈಕೆಯ ಯೋಗ ಪ್ರಯಾಣದ ಆರಂಭಕ್ಕೆ ಕಾರಣ. 9 ವರ್ಷಗಳ ಕಾಲ ಯೋಗ ಕಲಿತ ಈಕೆ ಇಂದ ಅದನ್ನೇ ಉದ್ಯೋಗವಾಗಿ ಮಾಡಿದ್ದಾರೆ. ಯೋಗದ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಲವು ಸಮಯ ಮತ್ತು ಪ್ರಯತ್ನ ಬೇಕಾಯಿತು. ಆದರೆ, ಇದನ್ನು ಪ್ರಾರಂಭಿಸುವುದು ಸವಾಲು ಅಲ್ಲ, ಸಮಯಕ್ಕಾಗಿ ಕಾಯಬೇಕಿಲ್ಲ.
ಅನುಷ್ಕಾ ಪರ್ವನಿ (272ಕೆ ಬೆಂಬಲಿಗರು): ಭಾರತದ ಮತ್ತೊಬ್ಬ ಪ್ರಭಾವಿ ಯೋಗ ಪಟು, ಸೆಲೆಬ್ರಿಟಿ ಅನುಷ್ಕಾ ಯೋಗಾ. ಇವರು ಬಹುತೇಕ ಮಂದಿಗೆ ಪರಿಚಿತವಿರಲು ಕಾರಣ, ಕರೀನಾ ಕಪೂರ್ ಗರ್ಭಾವಸ್ಥೆ ಸಮಯದಲ್ಲಿ ಇವರ ಪಾಠಗಳು. ಅನುಷ್ಕಾ ತಮ್ಮ ದೈನಂದಿನ ಪ್ರಯತ್ನದಿಂದಾಗಿ ಇಂದು ಬಲು ಯಶಸ್ವಿ ಉದ್ಯೋಗಿಯಾಗಿ ರೂಪುಗೊಂಡಿದ್ದಾರೆ
ಇವರು ಯೋಗಲೇಟ್ಸ್ ತರಗತಿಗಳನ್ನು ಹೇಳಿಕೊಡುತ್ತಾರೆ. ಮ್ಯಾಟ್ ಯೋಗ ಮತ್ತು ಮ್ಯಾಟ್ ಪೈಲೆಟ್ಸ್ ಮೂಲಕ ಯೋಗದ ಪ್ರಯೋಜನವನ್ನು ಪಡೆದಿದ್ದಾರೆ. ಒಂದು ಕೈಯಲ್ಲಿ ಫ್ಲೈಫಿಟ್, ಮತ್ತೊಂದು ಕೈಯಲ್ಲಿ ಸಾಂಪ್ರದಾಯಿಕ ಯೋಗ ಮ್ಯಾಟ್ ಜೊತೆಗೆ ಫ್ಲೈಟ್ ತಂತ್ರವನ್ನು ಬಳಕೆ ಮಾಡುತ್ತಾರೆ. ಇದು ಏರಿಯಲ್ ಯೋದ ಸಮ್ಮಿಳತವೂ ಆಗಿದೆ.
ದೀಪಿಕಾ ಮೆಹ್ತಾ (246ಕೆ ಬೆಂಬಲಿಗರು): ಇವರು ಇನ್ಸ್ಟಾಗ್ರಾಂ ಪ್ರೊಫೈಲ್ ನೋಡಿದಾಕ್ಷಣ ಒಮ್ಮೆ ನೀವು ದೀರ್ಘ ಉಸಿರು ಎಳೆದುಕೊಳ್ಳದೇ ಇರಲಾರಿರಿ. ಯೋಗದ ಅದ್ಬುತ ತಂತ್ರಜ್ಞಾನ ಮತ್ತು ಸಮರ್ಪಣೆಯನ್ನು ಇದರಲ್ಲಿ ಕಾಣಬಹುದು. ಸರಿಯಾದ ಕ್ರಮ ಮತ್ತು ಯೋಗದ ಕೌಶಲ್ಯಗಳನ್ನು ಕಾಣಬಹುದು.
ಸುನೈನಾ ರೇಖಿ (146ಕೆ ಬೆಂಬಲಿಗರು): ಯುವ ಯೋಗ ತರಬೇತುದಾರರು ಮತ್ತು ಆರೋಗ್ಯ ಹಾಗೂ ಜೀವನಶೈಲಿ ಕೋಚ್ ಇವರಾಗಿದ್ದಾರೆ. ರಿಷಿಕೇಶದಲ್ಲಿ ಇವರು ತಮ್ಮ ಯೋಗ ತರಬೇತಿಯನ್ನು ಪಡೆದಿದ್ದಾರೆ. ಸದ್ಯ ಮುಂಬೈನಲ್ಲಿ ಪ್ರಮುಖ ಯೋಗ ಸ್ಟುಡಿಯೋ ಸ್ಥಾಪಿಸಿ, ಅಲ್ಲಿ ತರಬೇತಿ ನೀಡುತ್ತಿದ್ದಾರೆ. ಈ ಮೂಲಕ ಅನೇಕ ಯುವ ಜನತೆಗೆ ಅವರು ಯೋಗದ ಅಭ್ಯಾಸ ಬಗ್ಗೆ ಒಲವು ಮೂಡಿಸುತ್ತಿದ್ದಾರೆ.
ಅಷ್ಟೇ ಅಲ್ಲ, ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಯೋಗವನ್ನು ಪ್ರದರ್ಶಿಸಿದ ಮಹಿಳೆ ಇವರಾಗಿದ್ದಾರೆ. ಯೋಗ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಯಾವ ರೀತಿ ಬಳಕೆ ಮಾಡಬಹುದು ಎಂಬುದನ್ನು ಸುನೈನ ತಿಳಿಸಿದ್ದಾರೆ.
ಸುವಿ ಚೌಧರಿ (133ಕೆ ಬೆಂಬಲಿಗ): ಸುವಿ ಚೌಧರಿ, ತಾಯಿ, ಹೆಂಡತಿ ಮತ್ತು ಮಗಳಾಗಿರುವುದರಿಂದ ಉದ್ಯೋಗಗಳನ್ನು ಬದಲಾಯಿಸುವಾಗ ಈ ಈ ಯೋಗ ಪ್ರಮುಖವಾಗುತ್ತದೆ ಎನ್ನುತ್ತಾರೆ. 2009ರಲ್ಲಿ ಆಕೆ ಯೋಗ ಮತ್ತು ಫಿಟ್ನೆಸ್ ಜಗತ್ತಿಗೆ ಕಾಲಿಟ್ಟರು. ಆಗಿನಿಂದ ಅವರು ಹಲವು ವಿಧದ ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಅಷ್ಟಾಂಗ ವಿನಯಸ, ಥೆರಪೆಟಿಕ್ ಯೋಗ, ಏರಿಯಲ್ ಯೋಗ ಮತ್ತು ಏರೋ ಯೋಗವಾಗಿದೆ.
ತಮ್ಮ ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಈಕೆ ಚೇತರಿಕೆಗಾಗಿ ಯೋಗವನ್ನು ಅಭ್ಯಾಸ ಮಾಡಿದರು. ಒಂದು ಸಮಸ್ಯೆಗೆ ಪರಿಹಾರ ಕಾಣಲು ಹೋದ ಅವರು ಫಿಟ್ನೆಸ್ ಮಿಷನ್ ಅನ್ನು ಸ್ಥಾಪಿಸಿದ್ದಾರೆ. ಅನೇಕ ಗಂಟೆಗಳ ಕಾಲ ಅಭ್ಯಾಸದಿಂದ ಅವರು ತಜ್ಞ ಯೋಗ ತರಬೇತಿದಾರರಾಗಿ ಮಾರ್ಪಟ್ಟಿದ್ದಾರೆ.
ನತಾಶಾ ನೋಯಲ್ (333ಕೆ ಬೆಂಬಲಿಗರು): ಯೋಗದ ಬಗ್ಗೆ ಪ್ರೀತಿ ಮತ್ತು ಒಲವನ್ನು ಹೊಂದಿರುವ ಅವರು ಯೋಗದಲ್ಲಿ ಸಕಾರಾತ್ಮಕ ಶಕ್ತಿಗಾಗಿ ಉತ್ತಮ ವ್ಯಾಯಾಮದ ಒಲವು ಹೊಂದಿದ್ದಾರೆ. ಯೋಗದ ಅಭ್ಯಾಸದ ಮೂಲಕ ಸ್ವಯಂ - ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಪ್ರಯೋಗ ಮಾಡಲು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ನೇಹಾ ಬಂಗೆಯ್ (112ಕೆ ಬೆಂಬಲಿಗರು): ಫಿಟ್ನೆಸ್ ಮತ್ತು ಲೈಫ್ಸ್ಟೈಲ್ ಬ್ಲಾಗರ್ ಜೊತೆಗೆ ರೀಬಾಕ್ ಮತ್ತು ಎಸಿಇ ಟ್ರೈನರ್ ಇವರಾಗಿದ್ದಾರೆ. ಎರಡು ತಾಯಿಯ ಮಕ್ಕಳಾಗಿರುವ ಇವರು ಎಫ್ಎಲ್ಆರ್ ಫೈಲಟ್ಸ್ ಟ್ರೈನರ್ ಆಗಿದ್ದಾರೆ. ಮದುವೆಯಾದರೇ ನಾಲ್ಕು ಗೋಡೆ ಮಧ್ಯೆ ಜೀವನ ಮುಗಿದು ಹೋಯಿತು ಎನ್ನುವವರಿಗೆ ಈಕೆ ಆದರ್ಶವಾಗಿದ್ದಾರೆ.