ನವದೆಹಲಿ: ಅತಿಯಾಗಿ ಸಂಸ್ಕರಿಸಿದ, ಎಣ್ಣೆಯುಕ್ತ ಆಹಾರ ಪದಾರ್ಥಗಳು ಹಾಗೂ ಜಂಕ್ ಫುಡ್ಗಳ ಸೇವನೆಯಿಂದ ಪಿತ್ತ, ಹುಳಿತೇಗು ಹಾಗೂ ಗ್ಯಾಸ್ ಟ್ರಬಲ್ ಸಮಸ್ಯೆಗಳು ತಲೆದೋರುತ್ತವೆ. ಇವುಗಳ ಸೇವನೆಯಿಂದ ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಮ್ಲೀಯ ಪದಾರ್ಥಗಳು ಸೃಷ್ಟಿಯಾಗಿ ಎದೆಯುರಿ, ಹೊಟ್ಟೆನೋವು, ಅಜೀರ್ಣತೆ ಹಾಗೂ ಮಲಬದ್ಧತೆಯ ಸಮಸ್ಯೆಗಳುಂಟಾಗುತ್ತವೆ. ಇನ್ನು ಕೆಲ ಬಾರಿ ಹಸಿವಿನ ಕೊರತೆಯೂ ಕಾಡಬಹುದು.
ಆದರೆ ನಿತ್ಯ ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ದೈಹಿಕ ದೃಢತೆಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸಬಹುದು. ಪಿತ್ತ ಹಾಗೂ ಅಮ್ಲೀಯತೆಯಿಂದ ಪಾರಾಗಲು ಅತ್ಯುತ್ತಮವಾದ ನಾಲ್ಕು ಯೋಗಾಸನಗಳ ಬಗ್ಗೆ ಗ್ರ್ಯಾಂಡ ಮಾಸ್ಟರ್ ಅಕ್ಷರ್ ಇವರು ತಿಳಿಸಿಕೊಟ್ಟಿದ್ದಾರೆ. ಆ ನಾಲ್ಕು ಆರೋಗ್ಯಕರ ಯೋಗಾಸನಗಳು ಯಾವುವೆಂದು ನೋಡೋಣ..
ವಜ್ರಾಸನ
ಊಟವಾದ ನಂತರ ತುಂಬಿದ ಹೊಟ್ಟೆಯಲ್ಲಿಯೂ ಮಾಡಬಹುದಾದ ಆಸನ ವಜ್ರಾಸನ.
ವಜ್ರಾಸನ ಮಾಡುವ ವಿಧಾನ:
ಮೊದಲಿಗೆ ನೇರವಾಗಿ ನಿಂತುಕೊಂಡು ನಿಧಾನವಾಗಿ ಉಸಿರಾಟ ನಡೆಸಿ
ಈಗ ಬೇಕಾದರೆ ಕಣ್ಣು ಮುಚ್ಚಿಕೊಳ್ಳಬಹುದು
ಈಗ ನಿಮ್ಮ ಭುಜಗಳು ದೇಹಕ್ಕೆ ನೇರವಾಗಿರಲಿ
ನಿಧಾನವಾಗಿ ಕಣ್ಣು ತೆರೆಯುತ್ತ ಮೊಣಕಾಲೂರಿ ಚಾಪೆಯ ಮೇಲೆ ಕುಳಿತುಕೊಳ್ಳಿ
ಕಾಲಿನ ಹೆಬ್ಬೆರಳು ಹೊರಗೆ ಚಾಚಿರುವಂತೆ ಹಿಮ್ಮಡಿಯ ಮೇಲೆ ಕುಳಿತುಕೊಳ್ಳಿ
ನಿಮ್ಮ ಮೊಣಕಾಲಿನ ಮೇಲೆ ಅಂಗೈಗಳು ಊರಿರುವಂತೆ ನೋಡಿಕೊಳ್ಳಿ
ಭುಜ ನೇರವಾಗಿದ್ದು, ಎದುರಿಗೆ ದೃಷ್ಟಿ ನೆಟ್ಟಿರಲಿ
ಇದೇ ಭಂಗಿಯಲ್ಲಿ ಕೆಲ ಹೊತ್ತು ಇದ್ದು, ಆಸನ ಕೊನೆಗೊಳಿಸಿ.
ಮಾಲಾಸನ
ಮಾಲಾಸನ ಮಾಡುವ ವಿಧಾನ:
ಸಮಸ್ಥಿತಿಯಲ್ಲಿದ್ದುಕೊಂಡು ನಿಧಾನವಾಗಿ ಮೊಣಕಾಲು ಬಗ್ಗಿಸಿ ಮತ್ತು ಹೊಟ್ಟೆಯನ್ನು ಕೆಳಗಿಳಿಸಿ
ಈಗ ನೀವು ಪದ್ಮಾಸನದ ರೀತಿಯಲ್ಲಿರುವಿರಿ
ಪಾದಗಳು ನೆಲದ ಮೇಲೆ ಊರಿರಲಿ ಹಾಗೂ ಮಂಡಿಗಳು ದೂರವಿರಲಿ
ಕೈಗಳನ್ನು ಹೊರಕ್ಕೆ ಚಾಚಿ ಎದೆಯ ಮೇಲೆ ನಮಸ್ಕಾರದ ಭಂಗಿಯಲ್ಲಿರಿಸಿ
ಈಗ ನಿಮ್ಮ ಬೆನ್ನು ನೇರವಾಗಿರಬೇಕು
ಏಕಪಾದ ಮಾಲಾಸನ
ಏಕಪಾದ ಮಾಲಶನ ಮಾಡುವ ವಿಧಾನ:
ಸಮಸ್ಥಿತಿಯಿಂದ ನಿಮ್ಮ ಮಂಡಿಯೂರುತ್ತ ಹೊಟ್ಟೆಯನ್ನು ಕೆಳಗೆ ತನ್ನಿ
ಈಗ ನೀವು ಪದ್ಮಾಸನದ ರೀತಿಯಲ್ಲಿರಬೇಕು
ಪಾದಗಳು ಭದ್ರವಾಗಿ ಊರಿರಲಿ ಹಾಗೂ ಮಂಡಿಗಳು ದೂರವಿರಲಿ
ಈಗ ಬಲಗೈಯನ್ನು ಮೇಲೆತ್ತಿ ಹಾಗೂ ಕೈಯಿಂದ ಬಲ ಮಂಡಿಯನ್ನು ಹೊರಗಡೆಯಿಂದ ಹಿಡಿದುಕೊಳ್ಳಿ
ಈಗ ಎಡಗೈಯಿಂದ ಹಿಂಭಾಗದಿಂದ ಬಲಗೈಯನ್ನು ಲಾಕ್ ಮಾಡಿ
ಬೆನ್ನು ನೇರವಾಗಿಟ್ಟುಕೊಂಡು ದೃಷ್ಟಿಯನ್ನು ಎದುರಿಗೆ ಇಟ್ಟುಕೊಳ್ಳಿ
ಮತ್ತೊಂದು ಬದಿಗೆ ಇದನ್ನೇ ಪುನರಾವರ್ತಿಸಿ
ದಂಡಾಸನ
ದಂಡಾಸನ ಮಾಡುವ ವಿಧಾನ:
ಕಾಲುಗಳನ್ನು ಹೊರಗೆ ಚಾಚಿ ಕುಳಿತುಕೊಳ್ಳಿ
ಕಾಲಿನ ಹೆಬ್ಬೆರಳು ವಿಶ್ರಾಂತ ಸ್ಥಿತಿಯಲ್ಲಿರಲಿ
ಬೆನ್ನು ನೇರವಾಗಿರಲಿ
ಈಗ ಕೈಗಳನ್ನು ನಿಧಾನವಾಗಿ ನೆಲಕ್ಕೆ ಒರಗಿಸಿ
ಲೇಖನ: ಪೂಜಾ ಗುಪ್ತಾ