ETV Bharat / sukhibhava

World Smile Day 2023: ಮನಸಾರೆ ನಕ್ಕು ಬಿಡಿ ಒಮ್ಮೆ... ಕಾರಣ ಇಷ್ಟೇ ಇಂದು ವರ್ಲ್ಡ್​​ ಸ್ಮೈಲ್​ ಡೇ! - ನಗುಮುಖದ ಪ್ರಾಮುಖ್ಯತೆಯ ಗುರಿ

ಅನೇಕ ಸಮಸ್ಯೆಗಳಿಗೆ ಪರಿಹಾರ ನಗು. ಈ ನುಗುವು ಪ್ರತಿಯೊಬ್ಬರ ಮುಖದಲ್ಲಿದ್ದರೆ, ಇದರಿಂದ ಇಡೀ ಪರಿಸರವೇ ಸಕಾರಾತ್ಮಕವಾಗಿರುತ್ತದೆ.

world-smile-day-everyone-should-celebrate-world-muscular-day-today-know-when-and-why-this-day-started

author img

By ETV Bharat Karnataka Team

Published : Oct 6, 2023, 11:53 AM IST

ಹೈದರಾಬಾದ್​: ವಿಶ್ವ ನಗುವಿನ ದಿನವನ್ನು ಪ್ರತಿ ವರ್ಷ ಅಕ್ಟೋಬರ್​​ ಮೊದಲ ಶುಕ್ರವಾರದಂದು ಆಚರಿಸಲಾಗುವುದು. ಈ ಮೂಲಕ ನಗುಮುಖದ ಪ್ರಾಮುಖ್ಯತೆಯ ಗುರಿಯನ್ನು ಹೊಂದಿದ್ದು, ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡುತ್ತದೆ.

ಇತಿಹಾಸ: ವಿಶ್ವ ನಗುವಿನ ದಿನವನ್ನು ಆರಂಭಿಸಿದವರು ಹರ್ವೆ ಬಾಲ್​. ಮೆಸಚ್ಯೂಸೆಟ್ಸ್​​ನ ವೊರ್ಸೆಸ್ಟರ್​​ನ ಕಮರ್ಷಿಯಲ್​ ಆರ್ಟಿಸ್ಟ್​​ ಆಗಿದ್ದ ಇವರು 1963ರಲ್ಲಿ ಜಗದ್ವಿಖ್ಯಾತಿ ಪಡೆದಿರುವ ಐಕಾನಿಕ್​ ಸ್ಮೈಲಿ ಫೇಸ್​ ಅನ್ನು ಸೃಷ್ಟಿಸಿದರು. ಈ ಸ್ಮೈಲಿ ಫೇಸ್​ ಹೆಚ್ಚೆಚ್ಚು ವಾಣಿಜ್ಯಕೀಕರಣಗೊಂಡಂತೆ ಹಾಗೂ ಸಮಯ ಕಳೆದಂತೆ ಅದರ ನೈಜ ಅರ್ಥ ಮತ್ತು ಉದ್ದೇಶವನ್ನು ಕಳೆದುಕೊಂಡಿತು. ನೈಜ ನಗು ಮತ್ತು ದಯೆಯ ಉದ್ದೇಶದಿಂದ ಹರ್ವೆ ಬಾಲ್​ ವಿಶ್ವ ನಗಯುವಿನ ದಿನವನ್ನು ಆರಂಭಿಸಿದರು.

ಹರ್ವೆ ಬಾಲ್​ ಅಕ್ಟೋಬರ್​ ಮೊದಲ ವಾರವನ್ನು ವಿಶ್ವ ನಗುವಿನದ ದಿನವಾಗಿ ಘೋಷಿಸಿದರು. 1999ರಲ್ಲಿ ವಿಶ್ವ ನಗುವಿನ ದಿನವನ್ನು ಜಗತ್ತಿನಾದ್ಯಂತ ಮೊದಲ ಬಾರಿಗೆ ಆಚರಿಸಿದರು. ಇದಾದ ಬಳಿಕ ಇದು ವಾರ್ಷಿಕ ಸಂಪ್ರದಾಯವಾಗಿ ರೂಢಿಯಾಯಿತು.

ಈ ವರ್ಷದ ಧ್ಯೇಯ: ವಿಶ್ವ ನಗುವಿನ ದಿನದ 2023ರ ಪ್ರಮಖ ಧ್ಯೇಯ ದಯೆಯಿಂದ ವರ್ತಿಸಿ. ಬೇರೆಯವರ ನಗುವಿಗೆ ಸಹಾಯ ಮಾಡಿ. ವಿಶ್ವ ನಗುವಿನ ದಿನದ ಚಿಹ್ನೆ ಪ್ರತಿಯೊಬ್ಬರಿಗೆ ಚಿರಪರಿತವಾಗಿರುವ ಸ್ಮೈಲಿ ಫೇಸ್​ ಐಕಾನ್​. ಈ ವರ್ಷವೀಡಿ ಸ್ಮೈಲ್​ ಫೇಸ್​​ ಎಂಬುದು ಪ್ರತಿಯೊಬ್ಬರುಗೆ ತಿಳಿದ ಚಿಹ್ನೆಯಾಗಿದ್ದು, ಇದನ್ನು ಹರ್ವೆ ಅವರೇ ಅನ್ವೇಷಣೆ ಮಾಡಿದ್ದಾರೆ. ಈ ಸ್ಮೈಲಿ ಫೇಸ್​ ಮೊದಲ ಬಾರಿಗೆ ಫಾರೆಸ್ಟ್​ ಗುಂಪ್​ ಸಿನಿಮಾನದಲ್ಲಿ ಮೊದಲ ಬಾರಿಗೆ ಕಂಡಿತು. ವಾಚ್​ಮೆನ್​ ಎಂಬ ಗ್ರಾಫಿಕ್​ ಕಾದಂಬರಿಯಲ್ಲಿ ಬಳಕೆ ಮಾಡಲಾಗಿತು.

ಮಹತ್ವ: ವಿಶ್ವ ನಗುವಿನ ದಿನದ ಮಹತ್ವ ದಯೆಯಿಂದ ವರ್ತಿಸುವ ಜೊತೆಗೆ ನಗುವಿನ ಮೂಲಕ ಖುಷಿಯನ್ನು ಹಂಚುವುದಾಗಿದೆ. ದಯೆ ಎಂಬುದು ಸಣ್ಣ ಸಣ್ಣ ವರ್ತನೆಗಳಲ್ಲಿಯೂ ಇರುತ್ತದೆ. ಬಾಗಿಲು ತೆಗೆಯುವುದು, ಪ್ರಶಂಸೆ ವ್ಯಕ್ತಪಡಿಸುವುದು ಅಥವಾ ಚಾರಿಟಿಗೆ ದಾನ ನೀಡುವುದಂಹ ಸಣ್ಣ ಸಣ್ಣ ಕೆಲಸದಲ್ಲಿದೆ. ನಗುವಿನ ಜೊತೆಗಿನ ಸಣ್ಣ ದಯೆಯ ಕೆಲಸ ಬೇರೊಬ್ಬರ ದಿನದಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಇದು ಅವರಲ್ಲಿ ಸಕಾರಾತ್ಮಕತೆ ಮತ್ತು ಖುಷಿಯನ್ನು ಜಗತ್ತಿಗೆ ತರುವಂತೆ ಮಾಡಬಹುದು.

ನಗುವಿನ ಹಿಂದಿನ ಅಸಲಿಯತ್ತು: ನಮ್ಮ ಮಿದುಳು ಖುಷಿಯಾಗಿದ್ದಾಗ ಎಂಡೋರ್ಪಿನ್​ ಅನ್ನು ಉತ್ಪಾದಿಸುತ್ತದೆ. ಈ ನಗರಗಳ ಸಂಕೇತರಗಳು ನಮ್ಮ ಮುಖದ ಸ್ನಾಯುಗಳಿಗೆ ನಗುವಂತೆ ಉತ್ತೇಜಿಸುತ್ತದೆ. ನಮ್ಮ ನಗುವಿನ ಸ್ನಾಯುಗಳು ಕಾರ್ಯ ನಿರ್ವಹಿಸಿದಾಗ ಅದು ಮತ್ತೆ ಮಿದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಈ ವರ್ತನೆಗಳಿಂದ ಖುಷಿಯ ಹಾರ್ಮೋನ್​ಗಳು ಏರಿಕೆ ಕಾಣುತ್ತದೆ. ಚಿಕ್ಕದಾಗಿ ಹೇಳಬೇಕು ಎಂದರೆ, ಮಿದುಳು ಸಂತೋಷವಾಗಿದ್ದರೆ, ನಾವು ನಗಯತ್ತೇವೆ. ನಾವು ನಕ್ಕಗ ಮಿದುಳು ಸಂತೋಷವಾಗಿರುತ್ತದೆ.

ನಗುವಿನ ಪ್ರಯೋಜನ: ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ, ರೋಧ ನಿರೋಧಕ ವ್ಯವಸ್ಥೆ ಉತ್ತೇಜನ ನೀಡುತ್ತದೆ. ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ನೈಸರ್ಗಿಕ ನೋವು ನಿವಾರಕವಾಗಿ ವರ್ತಿಸುತ್ತದೆ. ದೀರ್ಘ ಕಾಲ ಜೀವಿಸಲು ಸಹಾಯ ಮಾಡುತ್ತದೆ. ಒತ್ತಡ ನಿವಾರಿಸುತ್ತದೆ. ನಿಮ್ಮ ಮನಸ್ಥಿತಿ ಬದಲಾಯಿಸುತ್ತದೆ. ಯೌವನ ಕಾಪಾಡುವ ಜೊತೆಗೆ ಆಕರ್ಷಿಸುತ್ತದೆ. ಯಶಸ್ಸಿಗೆ ದಾರಿಯಾಗುತ್ತದೆ. ಸಕಾರಾತ್ಮಕವಾಗಿರಲು ಸಹಾಯ ಮಾಡುತ್ತದೆ.

ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನಗುವುದು ಅತ್ಯವಶ್ಯಕವಾಗಿದೆ. ನಿಮ್ಮ ಜೊತೆಗೆ ನಿಮ್ಮ ಸುತ್ತಮುತ್ತ ಪರಿಸರ ಕೂಡ ಸಂತೋಷವಾಗಿರುತ್ತದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮದ ಬಳಲಿಕೆಯು ತಪ್ಪು ಸುದ್ದಿಗಳನ್ನು ನಂಬುವಂತೆ ಮಾಡುತ್ತದೆ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.