ಅಕ್ಟೋಬರ್ ಮೊದಲ ಸೋಮವಾರವನ್ನು ವಿಶ್ವದಾದ್ಯಂತ "ವಿಶ್ವ ಆವಾಸ ದಿನ" ವನ್ನಾಗಿ ಆಚರಿಸಲಾಗುತ್ತದೆ. ಆವಾಸ ಸ್ಥಾನಗಳ ಪರಿಸ್ಥಿತಿ ಕುರಿತು ಚಿಂತನೆಗೆ ಹಚ್ಚುವುದು ಹಾಗೂ ಸೂಕ್ತವಾದ ಆವಾಸ ಸ್ಥಾನ ಹೊಂದುವ ಮೂಲ ಹಕ್ಕನ್ನು ಒತ್ತಿ ಹೇಳುವುದು ಈ ವಿಶ್ವ ಆವಾಸ ದಿನದ ಉದ್ದೇಶವಾಗಿದೆ. ಅದರ ಜೊತೆಗೆ ಮಾನವ ಆವಾಸಸ್ಥಾನದ ಭವಿಷ್ಯದ ಬಗ್ಗೆ ಇರುವ ಸಾಮೂಹಿಕ ಜವಾಬ್ದಾರಿಯ ಬಗ್ಗೆ ಜಗತ್ತಿಗೆ ನೆನಪಿಸುವುದು ಕೂಡ ಇದರ ಉದ್ದೇಶ.
ವಿಶ್ವ ಆವಾಸ ದಿನವು, ಆವಾಸ ಸ್ಥಾನವನ್ನು ಹೊಂದುವ ಮೂಲ ಹಕ್ಕಿನ ಬಗ್ಗೆ ಹೇಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸುರಕ್ಷಿತ ಮತ್ತು ಯೋಗ್ಯವಾದ ಮನೆಯನ್ನು ಹೊಂದಲು ಅರ್ಹನಾಗಿದ್ದಾನೆ ಎಂಬುದನ್ನು ಹೇಳುತ್ತದೆ. ಜೊತೆಗೆ ಪರಿಸರ ಜಾಗೃತಿಯನ್ನು ಉತ್ತೇಜಿಸುತ್ತದೆ. ಬೆಳೆಯುತ್ತಿರುವ ನಗರೀಕರಣ ಮತ್ತು ಪರಿಸರ ಕಾಳಜಿಗಳನ್ನು ಸಮತೋಲನಗೊಳಿಸಲು ಸುಸ್ಥಿರ ನಗರ ಅಭಿವೃದ್ಧಿ ಅಗತ್ಯವನ್ನು ಒತ್ತಿ ಹೇಳುತ್ತದೆ.
ವಿಶ್ವ ಆವಾಸ ದಿನದ ಪ್ರಾರಂಭ: 1986ರಲ್ಲಿ ಮೊದಲ ಬಾರಿಗೆ ಕೀನ್ಯಾದ ನೈರೋಬಿಯಾದಲ್ಲಿ 'ಆಶ್ರಯ ನನ್ನ ಹಕ್ಕು' (Shelter is My Right) ಎಂಬ ಥೀಮ್ನೊಂದಿಗೆ 'ವಿಶ್ವ ಆವಾಸ ದಿನ' ವನ್ನು ಆಚರಿಸಲಾಯಿತು. ಅದರ ನಂತರದಲ್ಲಿ ಪ್ರತಿ ವರ್ಷ ಹೊಸ ಥೀಮ್ಗಳೊಂದಿಗೆ ವಿಶ್ವ ಆವಾಸ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಆವಾಸ ದಿನವು ಜಾಗತಿಕ ವಸತಿ ಹಾಗೂ ನಗರಾಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತದೆ. ಯುನೈಟೆಡ್ ನೇಷನ್ಸ್ನ ಹ್ಯಾಬಿಟ್ಯಾಟ್ ಆದೇಶದಂತೆ, ಎಲ್ಲರೂ ಆಶ್ರಯತಾಣ ಹೊಂದಿರುವುದನ್ನು ಖಾತ್ರಿ ಪಡಿಸುವ, ಹಾಗೂ ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವ ಆವಾಸ ದಿನವನ್ನು ಆಚರಿಸಲಾಗುತ್ತಿದೆ.
ಯುನೈಟೆಡ್ ನೇಷನ್ಸ್ ವೆಬ್ಸೈಟ್ ನೀಡಿರುವ ಮಾಹಿತಿ ಪ್ರಕಾರ, 2023ರ ವಿಶ್ವ ಆವಾಸ ದಿನವನ್ನು, 'ಸ್ಥಿತಿಸ್ಥಾಪಕ ನಗರ ಆರ್ಥಿಕತೆಗಳು: ನಗರಗಳು ಬೆಳವಣಿಗೆ ಮತ್ತು ಚೇತರಿಕೆಯ ಎಂಜಿನ್ಗಳು' ವಿಶ್ವದಾದ್ಯಂತ ನಗರಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಅದರಲ್ಲೂ ವಿಶೇಷವಾಗಿ ಜಾಗತಿಕ ಆರ್ಥಿಕ ಕುಸಿತದ ಬಗ್ಗೆ ಹೇಳುತ್ತದೆ. ಜಾಗತಿಕವಾಗಿ ನಗರಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ನಿಭಾಯಿಸಲು ಅವಕಾಶವನ್ನು ಒದಗಿಸುತ್ತದೆ.
2023 ನಗರ ಆರ್ಥಿಕತೆಗಳಿಗೆ ವಿಶೇಷವಾಗಿ ಸವಾಲಿನ ವರ್ಷವಾಗಿದೆ. ಜಾಗತಿಕ ಆರ್ಥಿಕತೆಯ ಬೆಳವಣಿಗೆ ದರವು ಸುಮಾರು ಶೇ 2.5 ಕ್ಕೆ ಕುಸಿಯುತ್ತಿದೆ. ಈ ಬಾರಿ ರಾಷ್ಟ್ರೀಯ ಆರ್ಥಿಕತೆಯಲ್ಲಿ ನಗರಗಳ ಕೊಡುಗೆ ತೀರಾ ಕಡಿಮೆ. ಆರ್ಥಿಕ ಬೆಳವಣಿಗೆ ಮತ್ತು ಚೇತರಿಕೆಯನ್ನು ಸಮರ್ಥನೀಯವಾಗಿಸಲು, ಭವಿಷ್ಯದ ಆರ್ಥಿಕ ಆಘಾತಗಳನ್ನು ಹೀರಿಕೊಳ್ಳುವ, ಚೇತರಿಸಿಕೊಳ್ಳುವ ಮತ್ತು ತಯಾರಿ ಮಾಡುವ ನಗರಗಳು ನಮಗೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಥೀಮ್ ಕಾರ್ಯ ನಿರ್ವಹಿಸಲಿದೆ.
ಇದನ್ನೂ ಓದಿ: World Heart Day 2023: ಇಂದು ಹೃದಯ ದಿನ... ಏಕೆ, ಏನಿದರ ವಿಶೇಷತೆ?