ಹೈದರಾಬಾದ್: ದೇಹವನ್ನು ಕ್ರಿಯಾಶೀಲವಾಗಿಡುವ ಅತ್ಯುತ್ತಮ ವ್ಯಾಯಾಮ ವಿಧಾನದಲ್ಲಿ ಸೈಕಲಿಂಗ್ ಪ್ರಮುಖವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕೂಡ ಸೈಕಲಿಂಗ್ನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಒಪ್ಪಿದ್ದಾರೆ. ಇದೇ ಹಿನ್ನಲೆ ಈ ಸೈಕಲಿಂಗ್ಗೆ ಉತ್ತೇಜನ ನೀಡುವ ಹಿನ್ನಲೆ ವಿಶ್ವ ಬೈಸಿಕಲ್ ದಿನವನ್ನು ಜೂನ್ 3ರಂದು ಜಾಗತಿಕವಾಗಿ ಪರಿಗಣಿಸಲಾಗಿದೆ. ಈ ದಿನದ ಮೂಲ ಉದ್ದೇಶ ಎಂದರೆ, ಸೈಕಲಿಂಗ್ ಪರಿಸರಕ್ಕೆ ಹೇಗೆ ಹಾನಿಕಾರಕವಲ್ಲ ಎಂಬುದನ್ನು ತಿಳಿಸುವ ಜೊತೆಗೆ ಇದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡಲಿದೆ ಎಂಬುದು ತಿಳಿಸುವುದಾಗಿದೆ.
ಇಂದಿಗೂ ಕೂಡ ಸೈಕಲಿಂಗ್ ಅಭ್ಯಾಸ ಹೊಂದಿರುವ ಮುಂದಿ ಆರೋಗ್ಯಯುತವಾಗಿದ್ದಾರೆ. ಇದು ತೂಕ ಮಾತ್ರವಲ್ಲದೇ, ಸ್ನಾಯುಗಳ ಬಲಗೊಳಿಸಲು ಸಹಾಯ ಮಾಡುತ್ತದೆ. ಸೈಕ್ಲಿಂಗ್ ದೇಹಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಅನೇಕ ಲಾಭ ನೀಡುತ್ತದೆ. ಮೊದಲಿಗೆ, ಇದು ದೇಹವನ್ನು ಫಿಟ್ ಆಗಿಡುವ ಜೊತೆಗೆ ತೂಕ ನಿರ್ವಹಣೆಗೆ ಸಹಾಯವಾಗುತ್ತದೆ. ಇದು ಹೃದಯಾಘಾತ ಮತ್ತು ಮಧುಮೇಹ ನಿರ್ವಹಣೆ ಅಪಾಯವನ್ನು ತಡೆಯುತ್ತದೆ.
2018ರ ಏಪ್ರಿಲ್ನಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನಾಗಿ ಆಚರಣೆಯನ್ನು ಘೋಷಿಸಲಾಗಿದೆ. ಅಂದಿನಿಂದ ಈ ದಿನವನ್ನು ಜಾಗತಿನಾದ್ಯಮತ ಆಚರಣೆ ಮಾಡಲಾಗುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿ, ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜೊತೆಗೆ ವಾಹನಗಳು ಪೆಟ್ರೋಲ್ ಮತ್ತು ಡಿಸೇಲ್ ಗಳಿಂದ ಮಾಲಿನ್ಯ ಹೆಚ್ಚಿಸುತ್ತದೆ. ಆದರೆ, ಈ ಬೈಸಿಕಲ್ಗಳು ಪರಿಸರಕ್ಕೆ ಹೆಚ್ಚು ಪೂರಕವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಬೈಸಿಕಲ್ ಉತ್ತಮ ಆಯ್ಕೆ ಆಗಿದೆ. ಇದು ಪರಿಸರಕ್ಕೆ ಹಾನಿಕಾರಕವಲ್ಲ. ಜೊತೆಗೆ ಇದು ಉತ್ತಮ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಕಡಿಮೆ ಆದಾಯದ ದೇಶದಲ್ಲಿ ಸಾರಿಗೆಯಲ್ಲಿ ಬೈಸಿಕಲ್ ಪ್ರಮುಖ ಪಾತ್ರವಹಿಸುತ್ತದೆ. ಆದಾಗ್ಯೂ, ತಮ್ಮನ್ನು ತಾವು ಫಿಟ್ ಆಗಿ ಇರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಉತ್ತಮ ಆದಾಯದ ಜನರು ಬೈಸಿಕಲ್ ಬಳಕೆಗೆ ಒತ್ತು ನೀಡುತ್ತಿದ್ದಾರೆ.
18ನೇ ಶತನಮಾನದಲ್ಲಿ, ಯುರೋಪಿಯನ್ ದೇಶದ ಕುಶಲಕರ್ಮಿಗಳು ಈ ಬೈಸಿಕಲ್ ಅನ್ನು ಅವಿಷ್ಕಾರ ಮಾಡಿದರು. ಮೊದಲ ಬಾರಿಗೆ 1816ರಲ್ಲಿ ಪ್ಯಾರಿಸ್ನಲ್ಲಿ ಕಾಣಿಸಿಕೊಂಡಿತು. ಮೊದಲು ಇದರ ಚಕ್ರವನ್ನು ಹಾಬಿ ಅಥವಾ ಕುದುರೆ ಗಾಡಿ ಎಂದು ಕರೆಯುತ್ತಿದ್ದರು. 1885ರಲ್ಲಿ ಇದಕ್ಕೆ ಫುಡ್ ಪೆಡಲ್ ಅನ್ನು ಅವಿಷ್ಕಾರ ಮಾಡಲಾಯಿತು. ಇದಾದ ಬಳಿಕ ನಿಧಾನವಾಗಿ ಒಂದೊಂದೇ ಆವಿಷ್ಕಾರ ನಡೆಸುವ ಮೂಲಕ ಸೈಕಲ್ ಅನ್ನು ಸೃಷ್ಟಿಸಲಾಯಿತು. ಬಳಿಕ ಸಂಪೂರ್ಣವಾಗಿ ಬೈಸಿಕಲ್ ಅಭಿವೃದ್ಧಿ ಪಡಿಸಲಾಯಿತು. ಈ ವರ್ಷ 2023 ರಲ್ಲಿ ವಿಶ್ವ ಬೈಸಿಕಲ್ ದಿನವು ಆರೋಗ್ಯಕ್ಕಾಗಿ ಬೈಸಿಕಲ್ಗಳ ಪ್ರಾಮುಖ್ಯತೆ, ರೋಗಗಳ ತಡೆಗಟ್ಟುವಿಕೆ ಮತ್ತು ಕೈಗೆಟುಕುವ ಸಾರಿಗೆ ಸಾಧನವಾಗಿ ಜನರಿಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.
ಬೈಸಿಕಲ್ ಪ್ರಯೋಜಗಳು: ಸ್ನಾಯುಗಳ ಬಲ, ಉಸಿರಾಟ ನಿಯಂತ್ರಣ, ಕಾಲಿಗೆ ಬಲ, ತೂಕ ನಿರ್ವಹಣೆ, ರಕ್ತ ಪರಿಚಲನೆ ಸೇರಿದಂತೆ ಹಲವು ಪ್ರಯೋಜನವನ್ನು ಹೊಂದಿದೆ
ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುವ ಜೊತೆಗೆ ಮನಸ್ಸಿನ ನೆಮ್ಮದಿ ಹೆಚ್ಚಿಸುತ್ತದೆ ಜುಂಬ