ETV Bharat / sukhibhava

ಪಾಕಿಸ್ತಾನದಲ್ಲಿ ಪತ್ತೆಯಾಯ್ತು ವೈಲ್ಡ್​​ ಪೋಲಿಯೋ ವೈರಸ್​; ದೃಢಪಡಿಸಿದ ಸಚಿವಾಲಯ - ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದು

ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಅವರಲ್ಲಿ ನರ ಸಮಸ್ಯೆ ಮತ್ತು ಶಾಶ್ವತ ಅಂಗವೈಕಲ್ಯತೆಗೆ ದೂಡುತ್ತದೆ.

Wild poliovirus discovered in Pakistan
Wild poliovirus discovered in Pakistan
author img

By ETV Bharat Karnataka Team

Published : Sep 26, 2023, 5:15 PM IST

ಇಸ್ತಾಂಬುಲ್​: ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ ಪೋಲಿಯೋ ವೈರಸ್​ ನಿರ್ಮೂಲನೆಗೆ ವಿಶ್ವಸಂಸ್ಥೆ ಪಣತೊಟ್ಟಿದ್ದು, ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ನಡುವೆ ಪಾಕಿಸ್ತಾನದ ಕೊಳಚೆಯಲ್ಲಿ ವೈಲ್ಡ್​ ಪೋಲಿಯೋ ವೈರಸ್​ ಟೈಪ್​ 1 ಮಾದರಿ ಪತ್ತೆಯಾಗಿದೆ. ಪಾಕಿಸ್ತಾನದ ಎರಡು ವಿಭಿನ್ನ ಭಾಗದಲ್ಲಿ ಕೊಳಚೆ ನೀರಿನಲ್ಲಿ ಇದರ ಸುಳಿವು ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್​ 5 ರಂದು ಕರಾಚಿಯ ದಕ್ಷಿಣ ಬಂದರು ನಗರದಲ್ಲಿ ಕೊಳಚೆ ನೀರಿನಲ್ಲಿ ಈ ಮಾದರಿಯನ್ನು ಸಂಗ್ರಹಿಸಲಾಗಿದೆ. ಮತ್ತೊಂದನ್ನು ಹಂಗು ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದ್ದು, ಎರಡರ ಪರೀಕ್ಷೆ ನಡೆಸಿದಾಗ ಪಾಸಿಟಿವ್​​ ವರದಿ ಬಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್​ನಿಂದ ಲಸಿಕೆ ಅಭಿಯಾನ: ಪಾಕಿಸ್ತಾನದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿಕೆ ಕಾರ್ಯದ ಅಭಿಯಾನ ಅಕ್ಟೋಬರ್​ 2ರಿಂದ ಆರಂಭವಾಗಲಿದ್ದು, 40 ಮಿಲಿಯನ್​ ಮಕ್ಕಳಿಗೆ ಪೋಲಿಯೋ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಈ ವೇಳೆ ಕರಾಚಿ ಮತ್ತು ಹಂಗು ಪ್ರದೇಶದ ಎಲ್ಲಾ ಮಕ್ಕಳಿಗೂ ಕೂಡ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪರಿಸರದಲ್ಲಿ ಪೋಲಿಯೋ ವೈರಸ್​​ ಪತ್ತೆಯಾಗಿರುವುದು ಅತ್ಯಂತ ಕಾಳಜಿ ವಿಷಯವಾಗಿದ್ದು, ಇದು ಪಾಕಿಸ್ತಾನ ಪೋಲಿಯೋ ಕಾರ್ಯಕ್ರಮದ ಕಣ್ಗಾವಲು ವ್ಯವಸ್ಥೆಯ ದಕ್ಷತೆಯನ್ನು ಎತ್ತಿ ತೋರಿಸುತ್ತದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಸಚಿವರಾದ ನದೀಪ್​ ಜಾನ್​, ಮಕ್ಕಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ನಾವು ದೇಶಾದ್ಯಂತ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದೇವೆ. ಐದು ವರ್ಷದ ಮಕ್ಕಳಿಗೆ ಲಸಿಕೆ ಕೊಡಿಸುವಲ್ಲಿ ಪೋಷಕರು ಮುಂದಾಗಬೇಕು. ಅವರು ನಿಯಮಿತ ಲಸಿಕೆಯನ್ನು ಕೂಡ ಪಡೆಯಬೇಕು ಎಂದಿದ್ದಾರೆ.

ಈ ವರ್ಷ ಪಾಕಿಸ್ತಾನದಲ್ಲಿ ಎರಡು ಪೋಲಿಯೋ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ 27 ಪಾಸಿಟಿವ್​ ಪ್ರಕರಣಗಳು ಪರಿಸರದ ಮಾದರಿಯಲ್ಲಿ ಪತ್ತೆಯಾಗಿವೆ.

ಪೋಲಿಯೋ ಸೋಂಕಿನ ವಿರುದ್ಧ ಜಾಗತಿಕ ಹೋರಾಟದಲ್ಲಿ ಯಶಸ್ಸು ಕಂಡಿದೆಯಾದರೂ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಎರಡು ದೇಶಗಳು ಮಾತ್ರ ಇದರಿಂದ ಮುಕ್ತವಾಗಿಲ್ಲ. ಇದರ ವಿರುದ್ಧ ಇನ್ನೂ ಹೋರಾಟ ನಡೆಸುತ್ತಿವೆ. ಈ ವರ್ಷ ಅಫ್ಘಾನಿಸ್ತಾನದಲ್ಲಿ ಐದು ಪೋಲಿಯೋ ಪ್ರಕರಣ ಪತ್ತೆಯಾಗಿದ್ದು, 33 ಪರಿಸರ ಮಾದರಿ ಪ್ರಕರಣಗಳು ದಾಖಲಾಗಿವೆ. (ಐಎಎನ್​ಎಸ್​)

ಇದನ್ನೂ ಓದಿ: ಜಗತ್ತಿಗೆ ಮತ್ತೊಂದು ಕೋವಿಡ್​ ಸಾಂಕ್ರಾಮಿಕತೆಯ ಭೀತಿ; ಚೀನಾದ ವೈರಾಲಜಿಸ್ಟ್ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.