ತಾಪಮಾನ ಕುಸಿದಾಗ ರಾತ್ರಿಯ ಚಳಿಯಿಂದ ತಪ್ಪಿಸಿಕೊಳ್ಳಲು ಅನೇಕ ಜನರು ಸಾಕ್ಸ್ ಮತ್ತು ಸ್ವೆಟರ್‌ಗಳನ್ನು ಹಾಕಿಕೊಂಡು ಮಲಗುತ್ತಾರೆ. ಇದು ಮಕ್ಕಳು ಹಾಗೂ ವೃದ್ಧರಿಗೆ ಹೆಚ್ಚು ಸಹಾಯಕಾರಿಯಾದರೂ ಕೂಡ ಅವರನ್ನೂ ಒಳಗೊಂಡಂತೆ ಹೃದ್ರೋಗಿಗಳು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಹರಿಯಾಣ ಮೂಲದ ಹಿರಿಯ ವೈದ್ಯ ಡಾ. ರಾಜೇಶ್ ಸಿಂಗ್ ಗ್ರೆವಾಲ್ ಅವರು ಸ್ವೆಟರ್‌ಗಳೊಂದಿಗೆ ಮಲಗುವುದರಿಂದ ಉಂಟಾಗುವ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಅವು ಈ ಕೆಳಕಂಡಂತಿವೆ..
ಉಸಿರಾಟದ ಸಮಸ್ಯೆ
ಸ್ಟೆಟರ್ಗಳನ್ನು ಸಾಮಾನ್ಯವಾಗಿ ಉಣ್ಣೆ, ಹತ್ತಿ ಹಾಗೂ ಇತರ ಒರಟಾದ ದಪ್ಪ ಬಟ್ಟೆಯಿಂದ ತಯಾರಿಸಲಾಗುತ್ತದೆ. ಹೀಗಾಗಿ ಜನರು ಅವುಗಳನ್ನು ಪ್ರತಿದಿನ ತೊಳೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಧೂಳಿನ ಕಣಗಳು, ಬೆವರು ಮತ್ತು ದೇಹದ ಕೊಳಕು ಬಟ್ಟೆಗಳಲ್ಲಿ ಸಂಗ್ರಹವಾಗುತ್ತದೆ, ಇದು ಬಟ್ಟೆಯಲ್ಲಿ ಬ್ಯಾಕ್ಟೀರಿಯಾವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಈಗಾಗಲೇ ಅಸ್ತಮಾ, ಬ್ರಾಂಕೈಟಿಸ್‌ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಡಾ.ರಾಜೇಶ್ ವಿವರಿಸುತ್ತಾರೆ
ರಕ್ತದೊತ್ತಡದ ಮೇಲೆ ಪರಿಣಾಮ
ಒಬ್ಬ ವ್ಯಕ್ತಿಯು ಸಾಕ್ಸ್, ಟೋಪಿ ಅಥವಾ ಸ್ವೆಟರ್ ಧರಿಸಿ ರಾತ್ರಿ ಮಲಗಿದಾಗ ಅವರ ದೇಹವು ಬೆಚ್ಚಗಾಗಬಹುದು, ಆದರೆ ಇವುಗಳನ್ನು ಧರಿಸಿ ಮಲಗುವುದರಿಂದ ಬೆವರು ಹೆಚ್ಚುತ್ತದೆ. ನಮ್ಮ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ಅಂತಿಮವಾಗಿ ಇದು ಅವರ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ.
ಚರ್ಮದ ಸಮಸ್ಯೆಗಳು ಮತ್ತು ಅಲರ್ಜಿಗಳು
ನಿದ್ದೆ ಮಾಡುವಾಗ ಉಣ್ಣೆಯ ಬಟ್ಟೆಗಳನ್ನು ಧರಿಸುವುದರಿಂದ, ಅತಿಯಾದ ಶಾಖ ಮತ್ತು ಬೆವರುವಿಕೆಯಿಂದಾಗಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತದೆ. ಇದು ದದ್ದುಗಳು ಮತ್ತು ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು. ಈಗಾಗಲೇ ಧೂಳಿನ ಅಲರ್ಜಿ ಹೊಂದಿರುವವರ ಅಲರ್ಜಿ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಇದಲ್ಲದೆ ಆರೋಗ್ಯವಂತ ವ್ಯಕ್ತಿಯು ಸಹ ಅಲರ್ಜಿಗಳು ಅಥವಾ ಸೋಂಕುಗಳಿಗೆ ಒಳಗಾಗಬಹುದು. ಅಲ್ಲದೆ ರಾತ್ರಿ ವೇಳೆ ಸ್ವೆಟರ್ ಹಾಕಿಕೊಂಡರೆ ಅದರಲ್ಲಿನ ಧೂಳಿನಿಂದಾಗಿ ಕೆಮ್ಮು ಸಹ ಬರಬಹುದು.
ಏನು ಮಾಡಬಹುದು?
ಸ್ವೆಟರ್ ಹಾಕಿಕೊಂಡು ಮಲಗುವುದರಿಂದ ಇಷ್ಟೆಲ್ಲ ಸಮಸ್ಯೆಗಳು ಇರುವಾಗ ಹೊದಿಕೆಯ ಜೊತೆ ಸ್ವೆಟರ್ ಬಳಸಿ ಮಲಗುವ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡುವಂತೆ ಹಾಗೂ ದೇಹದ ಶಾಖವನ್ನು ಹೀರಿಕೊಳ್ಳುವ ವಿಚಾರದಲ್ಲಿ ನೋಡಿದರೆ ಉಣ್ಣೆಗಿಂತ ಹತ್ತಿಯಿಂದ ತಯಾರಿಸಿದ ಸ್ಟೆಟರ್ ಮತ್ತು ಸಾಕ್ಸ್‌ಗಳನ್ನು ಬಳಸುವಂತೆ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳುವುದು ಹೇಗೆ ಪ್ರಯೋಜನಕಾರಿ?