ETV Bharat / sukhibhava

ಕೋವಿಡ್​ ಸೋಂಕಿನಿಂದ ನಿರಂತರ ಬೆದರಿಕೆ ಕುರಿತು ಡಬ್ಲ್ಯೂಎಚ್​ಒ ಎಚ್ಚರಿಕೆ

ದೀರ್ಘಾವಧಿಯ ಕೋವಿಡ್​ ಹೆಚ್ಚಿನ ಬೆದರಿಕೆ ಒಡ್ಡುತ್ತವೆ ಎಂಬ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

WHO warns of persistent threats from Covid

author img

By ETV Bharat Karnataka Team

Published : Jan 13, 2024, 3:49 PM IST

ಜಿನೀವಾ: ಕೋವಿಡ್​ 19 ಸೋಂಕು ಎಲ್ಲ ದೇಶದಲ್ಲಿ ಪ್ರಸರಣ ಕಾಣುತ್ತಿದ್ದು, ಇದರಿಂದ ಎದುರಾಗುವ ಸಾರ್ವಜನಿಕ ಆರೋಗ್ಯ ಬೆದರಿಕೆಗಳು ಜಾಗತಿಕವಾಗಿ ಹೆಚ್ಚಿದೆ. ದೀರ್ಘವಾದಿಯ ಕೋವಿಡ್​ಗಳು ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ವೇಸ್ಟ್​​ವಾಟರ್​ ಅನಾಲಿಸಿಸ್​ ಆಧಾರಿತ ಅಂದಾಜಿನ ಪ್ರಕಾರ, ಕೋವಿಡ್​ 19 ಅಪಾಯವೂ ವರದಿಯಾಗಿರುವ ಪ್ರಕರಣಗಳಿಗಿಂತ ಎರಡರಿಂದ 19ರಷ್ಟು ಹೆಚ್ಚಿದೆ. ಈ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಧ್ಯಂತರ ನಿರ್ದೇಶಕಿ ಮರಿಯಾ ವನ್​ ಕೆರ್ಕೊವ್​​​, ಕೋವಿಡ್​ ನಂತರದ ಪರಿಸ್ಥಿತಿಗಳು ಅಂಗಾಂಗ ಹಾನಿ ಮಾಡುತ್ತದೆ ಎಂಬ ಕುರಿತು ಆತಂಕ ವ್ಯಕ್ತಪಡಿಸಿದರು.

ಕೋವಿಡ್​ ಉತ್ತುಂಗದ ಸಮಯಕ್ಕೆ ಹೋಲಿಕೆ ಮಾಡಿದಾಗ ಕೋವಿಡ್​​​ ಸಂಬಂಧಿತ ಸಾವಿನಲ್ಲಿ ಇದೀಗ ಗಣನೀಯ ಇಳಿಕೆ ಕಂಡಿದೆ. ಇಂದಿಗೂ 50ಕ್ಕೂ ಹೆಚ್ಚು ದೇಶದಲ್ಲಿ 10 ಸಾವಿರ ಸಾವು ದಾಖಲಾಗುತ್ತಿದೆ. ಪ್ರಸ್ತುತ ಕೋವಿಡ್​ 19ನ ಉಪತಳಿ ಜೆಎನ್​.1 ಸದ್ಯ ಜಾಗತಿಕವಾಗಿ ಶೇ 57ರಷ್ಟು ಪ್ರತಿನಿಧಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕೋವಿಡ್​​ ಸೋಂಕು ಕೂಡ ಆಯಾಸ, ಶ್ವಾಸಕೋಶ ಸಮಸ್ಯೆ, ನರ ಸಂಬಂಧಿತ ಸಮಸ್ಯೆ, ಹೃದಯ ನಿರಂತರ ಬೆದರಿಕೆ ಹೊಂದಿದೆ. ಇವುಗಳ ಲಕ್ಷಣಗಳು ಕೋವಿಡ್​ ಚೇತರಿಕೆ ಬಳಿಕ 12 ತಿಂಗಳು ಮತ್ತು ಅದಕ್ಕಿಂತ ದೀರ್ಘಾವಧಿ ಮುಂದುವರೆದಲ್ಲಿ ಅದು ದೀರ್ಘಾವಧಿ ಕೋವಿಡ್​ ಪರಿಸ್ಥಿತಿಯಾಗಿದ್ದು, ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಿದೆ ಎಂದು ತಿಳಿಸಿದ್ದಾರೆ.

10ರಲ್ಲಿ 1 ಸೋಂಕು ದೀರ್ಘಕಾಲದ ಕೋವಿಡ್​ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಇನ್ನು ದೀರ್ಘ ಕೋವಿಡ್​ ಪ್ರಕರಣಗಳು ಯಾವುದೇ ಚಿಕಿತ್ಸೆಯು ಲಭ್ಯವಿಲ್ಲ. ಕಾರಣ ಇದು ಇನ್ನೂ ಹೊಸದಾಗಿದೆ. ಉತ್ತರ ಧ್ರವಪ್ರದೇಶದಲ್ಲಿ ಇನ್ಫುಯೆಂಜಾ ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಕಂಡಿದೆ. ಈ ಪಾಸಿಟಿವಿ ದರವೂ 20-21ರಷ್ಟು ಕಂಡು ಬಂದಿದೆ. ಸಾಮಾನ್ಯ ಜ್ವರ ಮತ್ತು ಕೋವಿಡ್​ 19 ಲಸಿಕೆ ಪಡೆಯದಿರುವಿಕೆ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆ ಹಾಕಿದೆ.

ಜಾಗತಿಕವಾಗಿ ಸೋಂಕಿನ ರಕ್ಷಣೆಗೆ ಬೂಸ್ಟರ್​ ಲಸಿಕೆ ಪಡೆಯಬೇಕು. ಜಾಗತಿಕವಾಗಿ ಬೂಸ್ಟರ್​ ಡೋಸ್​ ಅನ್ನು ಕಡಿಮೆ ಪ್ರಮಾಣದಲ್ಲಿ ಪಡೆಯಲಾಗಿದ್ದು ಹಿರಿಯ ನಾಗರಿಕರೂ ಶೇ 55ರಷ್ಟು ಬೂಸ್ಟರ್​ ಡೋಸ್​ ಪಡೆದಿದ್ದಾರೆ. 2023ರ ಡಿಸೆಂಬರ್​ ಅಂತ್ಯಕ್ಕೆ ಕೋವಿಡ್​ 19ನಿಂದ 7 ಮಿಲಿಯನ್​ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜೆಎನ್ 1 ಕೊರೊನಾ ರೂಪಾಂತರದ ದೊಡ್ಡ ಅಲೆ ಬರಬಹುದು; ತಜ್ಞರ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.