ETV Bharat / sukhibhava

ಅತ್ಯುತ್ತಮ ಪರಿಸರ ಸ್ನೇಹಿ ಆಹಾರ ಪದ್ಧತಿ ಯಾವುದು? ಸಂಶೋಧನೆಗಳು ಏನು ಹೇಳುತ್ತವೆ? - ಮಾಂಸಾಹಾರ

ಇತ್ತೀಚೆಗೆ ಹುಟ್ಟಿಕೊಂಡಿರುವ ಹೊಸ ಆಹಾರ ಪದ್ಧತಿ ಎಂದರೆ ಹವಾಮಾನ ಆಹಾರ ಪದ್ಧತಿ. ಲಾಭರಹಿತ ಸಂಸ್ಥೆಯಾದ ಕ್ಲೈಮೇಟ್ಸ್​ ನೆಟ್​ವರ್ಕ್​ ಇದರ ಒಂದು ಆವೃತ್ತಿಯನ್ನು ತಿಳಿಸಿದೆ. ಈ ಆಹಾರ ಪದ್ಧತಿಯು ಆರೋಗ್ಯಕರ, ಪರಿಸರ ಸ್ನೇಹಿ ಮತ್ತು ಹವಾಮಾನ ಸ್ನೇಹಿಯಾಗಿದೆ ಎಂದು ಸಂಸ್ಥೆ ಹೇಳಿದೆ.

ಅತ್ಯುತ್ತಮ ಪರಿಸರ ಸ್ನೇಹಿ ಆಹಾರ ಪದ್ಧತಿ ಯಾವುದು
Which diet will help save our planet
author img

By

Published : Aug 13, 2022, 12:53 PM IST

Updated : Aug 13, 2022, 12:58 PM IST

ಲಂಡನ್: ನಾವು ಸೇವಿಸುವ ಆಹಾರವು ನಮ್ಮ ಭೂಮಿಯ ಸ್ಥಿತಿಗತಿಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಭೂಮಿಯ ಮೇಲಿನ ಅರ್ಧದಷ್ಟು ವಾಸಯೋಗ್ಯ ಭೂಮಿಯನ್ನು ಕೃಷಿ ಆಕ್ರಮಿಸುತ್ತದೆ. ಕೃಷಿಯು ಅರಣ್ಯಗಳು, ಇತರ ಪರಿಸರ ವ್ಯವಸ್ಥೆಗಳನ್ನು ನಾಶಪಡಿಸುತ್ತದೆ ಮತ್ತು ವಿಶ್ವದ ಹಸಿರುಮನೆ ಅನಿಲ ಹೊರಸೂಸುವಿಕೆಯ ಕಾಲು ಭಾಗ ಕೃಷಿಯಿಂದಲೇ ಉತ್ಪನ್ನವಾಗುತ್ತದೆ. ಮಾಂಸ ಮತ್ತು ಹೈನುಗಾರಿಕೆ ನಿರ್ದಿಷ್ಟವಾಗಿ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯ ಸುಮಾರು ಶೇ 14.5 ರಷ್ಟಿದೆ. ಆದ್ದರಿಂದ ನಾವು ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಕೃಷಿ ಉತ್ತೇಜಿಸಲು ಸಹಾಯ ಮಾಡುತ್ತದೆ.

ಈ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳಲು ನಮ್ಮೆದುರಿಗೆ ಹಲವಾರು ಪರಿಸರ ಸ್ನೇಹಿ ಆಹಾರ ಪದ್ಧತಿಗಳಿವೆ. ಸಸ್ಯ ಆಧರಿತ ಸಸ್ಯಾಹಾರಿ ಆಹಾರ ಪದ್ಧತಿಯು ಈವರೆಗೆ ನಮಗೆ ತಿಳಿದ ಅತ್ಯುತ್ತಮ ಆಹಾರ ಪದ್ಧತಿಯಾಗಿದೆ. ಇದರಲ್ಲಿ ಮೊಟ್ಟೆ ಹಾಗೂ ಹೈನುಗಳನ್ನು ಸಹ ಸೇರಿಸಿಕೊಳ್ಳಬಹುದು. ಇದರ ಜೊತೆಗೆ ಕಡಲು ಆಹಾರ ಪದ್ಧತಿ ಸಹ ಉತ್ತಮವಾಗಿದೆ.

ಏನಿದು ಫ್ಲೆಕ್ಸಿಟರೇನಿಯನ್ ಡಯಟ್?: ಫ್ಲೆಕ್ಸಿಟರೇನಿಯನ್ ಡಯಟ್ ಎಂದು ಕರೆಯಲಾಗುವ ಆಹಾರ ಪದ್ಧತಿಯಲ್ಲಿ ಮೂರು ಹೊತ್ತಿನ ಮಾಂಸ ಹಾಗೂ ಹೈನು ಊಟವನ್ನು ಸಂಪೂರ್ಣ ಸಸ್ಯ ಆಧರಿತ ಆಹಾರದೊಂದಿಗೆ ಬದಲಾಯಿಸಲಾಗುತ್ತದೆ. ಮೆಡಿಟರೇನಿಯನ್ ಡಯೆಟ್ ಪದ್ಧತಿಯಲ್ಲಿ ಮಧ್ಯಮ ಪ್ರಮಾಣದ ಕೋಳಿ, ಹಂದಿ ಮಾಂಸ, ಕುರಿಮಾಂಸ ಮತ್ತು ಗೋಮಾಂಸ ಸೇವಿಸಲಾಗುತ್ತದೆ. ಇವೆಲ್ಲವುಗಳ ಮಧ್ಯೆ ಯಾವ ಆಹಾರ ಪದ್ಧತಿ ಉತ್ತಮ ಎಂಬುದನ್ನು ನಿರ್ಧರಿಸುವುದು ಕಷ್ಟದ ವಿಷಯವಾಗುತ್ತದೆ.

ಜಗತ್ತಿನಲ್ಲಿ ಹುಟ್ಟಿಕೊಂಡಿರುವ ಹೊಸದೊಂದು ನಂಬಿಕೆಯ ಬಗ್ಗೆ ನೋಡೋಣ.. ಇತ್ತೀಚೆಗೆ ಹುಟ್ಟಿಕೊಂಡಿರುವ ಹೊಸ ಆಹಾರ ಪದ್ಧತಿ ಎಂದರೆ ಹವಾಮಾನ ಆಹಾರ ಪದ್ಧತಿ. ಲಾಭರಹಿತ ಸಂಸ್ಥೆಯಾದ ಕ್ಲೈಮೇಟ್ಸ್​ ನೆಟ್​ವರ್ಕ್​ ಇದರ ಒಂದು ಆವೃತ್ತಿಯನ್ನು ತಿಳಿಸಿದೆ.

ಈ ಆಹಾರ ಪದ್ಧತಿಯು ಆರೋಗ್ಯಕರ, ಪರಿಸರ ಸ್ನೇಹಿ ಮತ್ತು ಹವಾಮಾನ ಸ್ನೇಹಿಯಾಗಿದೆ ಎಂದು ಸಂಸ್ಥೆ ಹೇಳಿದೆ. ಇದರ ಪ್ರಕಾರ ಸರಳವಾದ ಆಹಾರ ಬದಲಾವಣೆಯ ಮೂಲಕ ಪ್ರತಿ ವ್ಯಕ್ತಿಯು ಪ್ರತಿವರ್ಷ ಟನ್​ಗಟ್ಟಲೆ ಇಂಗಾಲದ ಡೈ ಆಕ್ಸೈಡ್ ಸಮಾನದಷ್ಟು ಮಾಲಿನ್ಯ ತಪ್ಪಿಸಬಹುದು. (ಸಮಾನದ ಎಂದರೆ ಕಾರ್ಬನ್ ಡೈ ಆಕ್ಸೈಡ್​ ನೊಂದಿಗೆ ಮಿಥೇನ್ ಹಾಗೂ ಇತರ ಹಸಿರುಮನೆ ಅನಿಲಗಳು).

ಕ್ಲೈಮೇಟ್ ಕಾರ್ನಿವೋರ್ ಡಯೆಟ್​: ಇದು ಕೇಳಲು ತುಂಬಾ ಚೆನ್ನಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ನೀವು ಮಾಂಸ ಮತ್ತು ಇತರ ಹೆಚ್ಚು ಇಂಗಾಲ ಬಿಡುಗಡೆಗೆ ಕಾರಣವಾಗುವ ಹಂದಿಮಾಂಸ, ಕೋಳಿಮಾಂಸ, ಮೀನು, ಹೈನು ಪದಾರ್ಥಗಳು ಮತ್ತು ಮೊಟ್ಟೆಗಳನ್ನು ಸೇವಿಸಬಹುದು. ಅಂದರೆ ಇದು ಕ್ಲೈಮೇಟ್ ಕಾರ್ನಿವೋರ್ ಡಯೆಟ್​ನ ಹೊಸ ಆವೃತ್ತಿಯಂತಿದೆ.

ರೆಡ್​ ಮೀಟ್ (ದನದ ಮಾಂಸ, ಕುರಿ ಮಾಂಸ, ಹಂದಿ ಮಾಂಸ) ಬದಲಾಗಿ ಇತರ ಮಾಂಸ ಮತ್ತು ಮೀನು ಸೇವನೆ ಅಳವಡಿಸಿಕೊಳ್ಳುವುದು ಇದರ ಭಾಗವಾಗಿದೆ. ಒಟ್ಟಾರೆಯಾಗಿ ಮಾಂಸ ಸೇವನೆಯನ್ನು ಕಡಿಮೆ ಮಾಡುವ ಮತ್ತು ಲಭ್ಯವಿರುವ ಕಡೆಯಲ್ಲಿ ಸ್ಥಳೀಯ ಮಾಂಸ ಸೇವಿಸುವ, ಆಹಾರ ನಾಶ ತಪ್ಪಿಸುವ ಮತ್ತು ಋತುಮಾನಕ್ಕನುಗುಣವಾಗಿ, ಸ್ಥಳೀಯ ಆಹಾರಗಳನ್ನು ಸೇವಿಸುವುದನ್ನು ಇದು ಒಳಗೊಂಡಿದೆ.

ಟನ್​ಗಟ್ಟಲೆ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಆಗುವುದನ್ನು ತಪ್ಪಿಸುವುದು ಮಹತ್ವದ ಅಂಶವೇ ಆದರೂ, ಸಂಪೂರ್ಣ ಸಸ್ಯಾಹಾರಕ್ಕೆ ಬದಲಾಗುವುದರಿಂದ ನೀವು ಮತ್ತಷ್ಟು ಇಂಗಾಲದ ಬಿಡುಗಡೆಯನ್ನು ಉಳಿಸಬಹುದು. ಪಾಶ್ಚಿಮಾತ್ಯ ಶೈಲಿಯ ಮಾಂಸ ಆಧರಿತ ಆಹಾರವು ಪ್ರತಿದಿನ 7.2 ಕಿಲೋಗ್ರಾಂ ಗಳಷ್ಟು ಇಂಗಾಲದ ಡೈ ಆಕ್ಸೈಡ್ ಸಮಾನ ಅನಿಲ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತದೆ.

ಅದರಂತೆ ಸಸ್ಯಾಹಾರಿ ಆಹಾರವು ಕ್ರಮವಾಗಿ 3.8 ಕೆಜಿ ಮತ್ತು 2.9 ಕೆಜಿ ಇಂಗಾಲದ ಡೈ ಆಕ್ಸೈಡ್ ಸಮಾನ ಅನಿಲ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತದೆ. ಒಂದು ವೇಳೆ ಇಡೀ ಜಗತ್ತು ಸಸ್ಯಾಹಾರಕ್ಕೆ ಬದಲಾದರೆ 8 ಬಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್ ಸಮಾನ ಅನಿಲ ಮಾಲಿನ್ಯಕಾರಕಗಳು ಬಿಡುಗಡೆ ಆಗದಂತೆ ತಡೆಯಬಹುದು.

ಅದರಂತೆ ಮೆಡಿಟರೇನಿಯನ್ ಡಯೆಟ್ ಅನುಸರಿಸಿದಲ್ಲಿ 3 ಬಿಲಿಯನ್ ಟನ್​ ಇಂಗಾಲದ ಡೈ ಆಕ್ಸೈಡ್ ಸಮಾನ ಅನಿಲ ಮಾಲಿನ್ಯಕಾರಕಗಳು ಬಿಡುಗಡೆ ಆಗದಂತೆ ತಡೆಯಬಹುದು. ಇದು ಒಟ್ಟಾರೆ ಆಹಾರದಿಂದ ಬಿಡುಗಡೆಯಾಗುವ ಇಂಗಾಲ ಮಾಲಿನ್ಯದ ಶೇ 60 ರಿಂದ ಶೇ 20 ರಷ್ಟಾಗುತ್ತದೆ. ಆಹಾರದಿಂದ ಪ್ರಸ್ತುತ ವಿಶ್ವದಲ್ಲಿ 13.7 ಬಿಲಿಯನ್ ಟನ್ ಇಂಗಾಲದ ಮಾಲಿನ್ಯಕಾರಕಗಳು ಬಿಡುಗಡೆಯಾಗುತ್ತಿವೆ.

ಇದನ್ನು ಓದಿ: ಆರೋಗ್ಯಕರ ಜೀವನಶೈಲಿಗಾಗಿ ಪೌಷ್ಟಿಕ ತಜ್ಞರು ಶಿಫಾರಸು ಮಾಡಿದ 5 ಬಗೆಯ ಜೂಸ್​​ಗಳು

Last Updated : Aug 13, 2022, 12:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.