ಫಿಟ್ನೆಸ್ನಲ್ಲಿ ಸ್ಥಿರತೆ (Consistency) ಎಂಬುದು ಕೂಡ ಅವಶ್ಯಕ. ಆದರೆ, ಸ್ಥಿರತೆಗೆ ನಾವು ಕಡಿಮೆ ಗಮನ ನೀಡುತ್ತೇವೆ. ವ್ಯಾಯಾಮ ಮಾಡಲು ಮನಸ್ಸಾಗದ ದಿನದಲ್ಲಿ ನಿಮ್ಮ ದೈನಂದಿನ ದಿನಚರಿಯನ್ನು ಎಂದಿನಂತೆ ಮುಂದುವರಿಸಲು, ಸರಳ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅಂತಹ ಕೆಲವು ಸರಳ ವ್ಯಾಯಾಮದ ಸಲಹೆಗಳು ಇಲ್ಲಿವೆ.
ಹೆಜ್ಜೆ ಲೆಕ್ಕ: ನೀವು ವ್ಯಾಯಾಮ ಮಾಡಲು ಅಥವಾ ಜಿಮ್ ಚಟುವಟಿಕೆಯಲ್ಲಿ ಭಾಗಿಯಾಗಲು ನಿಮಗೆ ಇಷ್ಟ ಇಲ್ಲದಿದ್ದರೆ, ನೀವು ಹೆಜ್ಜೆ ಲೆಕ್ಕ ಹಾಕಬಹುದು. ಅಂದರೆ ದಿನಕ್ಕೆ 10 ಸಾವಿರ ನಡೆಯುವುದು ಈ ರೀತಿ ನಡೆಯುವ ಗುರಿಯನ್ನು ನೀವು ಹೊಂದಬಹುದು. ಇದನ್ನು ನಿರ್ದಿಷ್ಟ ಸಮಯಕ್ಕೆ ಎಂದು ಎಣಿಸದೇ ದಿನ ಪೂರ್ತಿಗೆ ಮಾಡಬಹುದಾಗಿದೆ.
ವಾಕ್/ ಜಾಗ್: ಅಧಿಕ ವ್ಯಾಯಮ ಅಲ್ಲದಿದ್ದರೂ ಸರಳವಾದ ವಾಕ್ ಅಥವಾ ಓಟವನ್ನು ನಡೆಸಬಹುದು. ಇದು ನಿಮ್ಮ ಮನಸ್ಸಿಗೆ ಕೂಡ ರಿಫ್ರೆಶ್ ಅನುಭವ ನೀಡುತ್ತದೆ.
ಮನೆಯಲ್ಲಿಯೇ ವರ್ಕೌಟ್: ಜಿಮ್ಗೆ ಹೋಗದೇ ಮನೆಯಲ್ಲಿಗೆ ಸರಳವಾದ ಪರಿಣಾಮಕಾರಿ ವ್ಯಾಯಾಮ ಮಾಡಬಹುದು. ಮನೆಯಲ್ಲಿ ಬೇಗ ಮತ್ತು ಸರಳ ಸೂಪರ್ ಸಿಂಪಲ್ ವ್ಯಾಯಾಮ ಮಾಡುವುದರಿಂದ ನಿಮ್ಮ ದಿನ ಕೂಡ ಚೆನ್ನಾಗಿರಲಿದೆ.
ವಾರ್ಮ್ ಅಪ್
ಅಪ್ಪರ್ ಬಾಡಿ ವರ್ಮ್ ಅಪ್ (ಕೈ ಬೀಸುವುದು, ಭುಜ ತಿರುಗಿಸುವುದು)- 10 ಬಾರಿ
ಲೋವರ್ ಬಾಡಿ ವರ್ಮ್ ಅಪ್ ( ಕಾಲು ಬೀಸುವುದು ) 10 ಬಾರಿ
ಸ್ಕ್ವಾಟ್ , ವಾಲ್ ಪುಶ್ ಅಪ್ ರೀತಿಯ ವ್ಯಾಯಾಮಗಳು ಸರಳವಾಗಿದ್ದು, ವೈದ್ಯರ ಸಲಹೆ ಮೇಲೆ ದಿನನಿತ್ಯ ಮಾಡಬಹುದಾಗಿದೆ.
ಸಾಮಾನ್ಯ ಕ್ರೀಡೆ: ಫುಟ್ಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್, ಟೆನ್ನಿಲ್ ನಂತಹ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವುದಾಗಿದೆ. ಇದು ನಿಮ್ಮ ದಿನವನ್ನು ಉತ್ತಮ ದಿನವಾಗಿಡಲು ಸಹಕಾರಿಯಾಗಿದೆ. ಜೊತೆಗೆ ಈ ಕ್ರೀಡೆಗಳಲ್ಲಿ ತೊಡಗುವುದರಿಂದ ಸ್ನೇಹಿತರ ಪರಿಚಯದಂತಹ ಸಾಮಾಜೀಕರಣ ಕೂಡ ನಡೆಯುತ್ತದೆ.
ಇದನ್ನೂ ಓದಿ: ಬ್ಲಾಕ್ ಟೀ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಬಹುದು: ಅಧ್ಯಯನ