ETV Bharat / sukhibhava

World Pre-Diabetes Day: ಪೂರ್ವ ಮಧುಮೇಹ ಎಂದರೇನು? ಇದರ ಲಕ್ಷಣ - ತಡೆಗಟ್ಟುವಿಕೆ ಬಗ್ಗೆ ಇರಲಿ ಮಾಹಿತಿ - ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಕಾಳಜಿ

ಪೂರ್ವ ಮಧುಮೇಹವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಅದು ಟೈಪ್​ 2 ಡಯಾಬೀಟಿಸ್​​ಗೆ ಕಾರಣವಾಗುತ್ತದೆ.

What is pre-diabetes  its symptom-prevention

author img

By

Published : Aug 14, 2023, 10:20 AM IST

ಇಂದು ಜಗತ್ತಿನಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿದ್ದು ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಕಾಳಜಿ ವಿಷಯ ಆಗಿದೆ. ಈ ನಿಟ್ಟಿನಲ್ಲಿ ಪೂರ್ವ ಮಧುಮೇಹವೂ ಒಂದಾಗಿದೆ. ಇದೇ ಕಾರಣಕ್ಕೆ ಆಗಸ್ಟ್​​ 14 ರಂದು ವಿಶ್ವ ಪೂರ್ವ ಮಧುಮೇಹ ದಿನವನ್ನು ಆಚರಿಸುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಲಾಗುವುದು. ಪೂರ್ವ ಮಧುಮೇಹ ಪರಿಸ್ಥಿತಿ ಎಂಬುದು ಟೈಪ್​ 2 ಮಧುಮೇಹ ಪತ್ತೆಗೆ ಮುಂಚಿನ ಪರಿಸ್ಥಿತಿಯಾಗಿದ್ದು, ಈ ವೇಳೆ, ರಕ್ತದ ಸಕ್ಕರೆ ಮಟ್ಟ ಅಧಿಕಕ್ಕಿಂತ ಸಾಮಾನ್ಯವಾಗಿರುತ್ತದೆ. ವಿಶ್ವದಾದ್ಯಂತ 3ರಲ್ಲಿ 1 ವಯಸ್ಕರು ಪೂರ್ವ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಅವರಲ್ಲಿ ಟೈಪ್​ 2 ಮಧುಮೇಹ ಅಭಿವೃದ್ಧಿ ಅಪಾಯದ ಜೊತೆಗೆ ಹೃದಯ ರೋಗ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗಲಿದೆ.

ಆಗಸ್ಟ್​ 14 ಯಾಕೆ?: 2021ರಲ್ಲಿ ಆಗಸ್ಟ್​ 14 ಅನ್ನು ಪೂರ್ವ ಮಧುಮೇಹ ದಿನವಾಗಿ ಆಚರಿಸಲಾಯಿತು. ಈ ದಿನದ ಬಳಿಕ ಸರಿಯಾಗಿ 90 ದಿನಕ್ಕೆ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುವುದು. ಅಂದರೆ ನವೆಂಬರ್​ 14 ವಿಶ್ವ ಮಧುಮೇಹ ದಿನವಾಗಿದ್ದು, ಈ ಮೂಲಕ 90 ದಿನಗಳಲ್ಲಿ ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಆರಂಭಿಕ ಹಂತದ ಮಧುಮೇಹವನ್ನು ತಪ್ಪಿಸಬಹುದಾಗಿದೆ.

ಪೂರ್ವ ಮಧುಮೇಹದ ಲಕ್ಷಣ

  • ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ
  • ಚರ್ಮ ಕಿತ್ತು ಬರುವುದು
  • ಕಣ್ಣಿನ ದೃಷ್ಟಿ ದುರ್ಬಲ
  • ದೇಹ ಸದ ಬಳಲಿದಂತೆ ಅನುಭವ
  • ಪಾದದಲ್ಲಿ ಸದಾ ನೋವು
  • ರಕ್ತದೊತ್ತಡ ದಿಢೀರ್​ ಏರಿಕೆ
  • ಕಡಿಮೆ ಶಕ್ತಿ

ಪೂರ್ವ ಮಧುಮೇಹಕ್ಕೆ ಕಾರಣ

  • ಸರಿಯಾದ ನಿದ್ದೆ ಕೊರತೆ
  • ಜಢ ಜೀವನಶೈಲಿ
  • ಮದ್ಯಪಾನ ಮತ್ತು ಧೂಮಪಾನ
  • ಅಸಮತೋಲಿತ ಆಹಾರ ಪದ್ಧತಿ
  • ದಿಢೀರ್​​ ತೂಕ ಹೆಚ್ಚಳ

ಪೂರ್ವ ಮಧುಮೇಹ ತಡೆಯುವ ದಾರಿ

  • ಆರೋಗ್ಯಯುತ ಆಹಾರ ಸೇವನೆ
  • ಹೆಚ್ಚು ಕ್ರಿಯಾಶೀಲರಾಗುವುದು
  • ಅಧಿಕ ತೂಕ ನಷ್ಟ
  • ಧೂಮಪಾನ ನಿಲ್ಲಿಸುವುದು
  • ಅಗತ್ಯ ಔಷಧಗಳ ಸೇವನೆ

ಪೂರ್ವ ಮಧುಮೇಹವನ್ನು ಆರಂಭಿಕ ಹಂತದಲ್ಲಿ ಅಗತ್ಯ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಇದರ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಯಾವಾಗಲೂ ಸಮಸ್ಯೆಗಳನ್ನು ತಡೆಗಟ್ಟುವಿಕೆ ಅಗತ್ಯವಾಗಿರುತ್ತದೆ. ಸರ್ಕಾರವೂ ಕೂಡ ಈ ಪೂರ್ವ ಮಧುಮೇಹ ಆರೋಗ್ಯ ಬಿಕ್ಕಟ್ಟಿನ ಸಮಸ್ಯೆ ಎಂಬುದನ್ನು ಪರಿಗಣಿಸಿದ್ದು, ಈ ಕುರಿತು ತಿಳಿ ಹೇಳಬೇಕು ಎಂದು ಪರಿಗಣಿಸಿದೆ. ಈ ಸಂಬಂಧ ಜನರಲ್ಲಿ ಆರೋಗ್ಯಯುತ ಜೀವನಶೈಲಿ ಪರಿಸರ ಸೃಷ್ಟಿಗೆ ನಿಯಮಗಳನ್ನು ಅಭಿವೃದ್ಧಿ ಪಡಿಸಿದೆ. ಇದಕ್ಕಾಗಿ ಸಕ್ಕರೆ ಮೇಲೆ ತೆರಿಗೆ, ಪೋಷಕಾಂಶ ಆಹಾರ ಲಭ್ಯತೆ ಹೆಚ್ಚಿಸುವುದು, ಸಮುದಾಯಿಕ ದೈಹಿಕ ಚಟುವಟಿಕೆ ಹೆಚ್ಚಿಸುವ ಅವಕಾಶವನ್ನು ರೂಪಿಸಿದೆ.

ಆರೋಗ್ಯ ಸಂಘಟನೆಗಳು, ಎನ್​ಜಿಒ ಮತ್ತು ಜಗತ್ತಿನಲ್ಲಿರುವ ವೈದ್ಯಕೀಯ ವೃತ್ತಿಪರರು ಕೂಡ ಪೂರ್ವ ಮಧುಮೇಹ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಕಾರ್ಯಕ್ರಮ, ಸೆಮಿನಾರ್​ ಮತ್ತು ಆನ್​ಲೈನ್​ ಅಭಿಯಾನಗಳನ್ನು ಸಂಘಟಿಸುವ ಮೂಲಕ ಇದರ ಪೂರ್ವ ಪತ್ತೆ ಮತ್ತು ತಡೆಗಟ್ಟುವಿಕೆ ಕುರಿತು ಶಿಕ್ಷಣ ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಆರೋಗ್ಯಯುತ ಆಯ್ಕೆ ಕುರಿತು ಮಾರ್ಗ ದರ್ಶನ ನೀಡುವ ಕೊತೆಗೆ ಈ ಸಂಬಂಧ ಪತ್ತೆ ಮಾಡುವ ಸಾಧನಗಳನ್ನು ನೀಡಲಾಗುತ್ತಿದೆ,

ಈ ವರ್ಷದ ವಿಶ್ವ ಪೂರ್ವ ಮಧುಮೇಹ ದಿನದ ಘೋಷವಾಕ್ಯ, 'ತ್ವರಿತ ಕಾರ್ಯಾಚರಣೆ, ಮಧುಮೇಹ ತಡೆ' (Act Early, Prevent Diabetes) ಆಗಿದೆ. ಈ ಮೂಲಕ ಪ್ರತಿಯೊಬ್ಬರಲ್ಲೂ ಟೈಪ್​ 2 ಮಧುಮೇಹಕ್ಕೆ ತುತ್ತಾಗದಂತೆ ಅವರಲ್ಲಿ ಆರೋಗ್ಯಯುತ ಜೀವನಶೈಲಿ ಬದಲಾವಣೆಗೆ ಉತ್ತೇಜಿಸಿದೆ. ಈ ಬದಲಾವಣೆಯಲ್ಲಿ ಆರೋಗ್ಯಯುತ ಆಹಾರ ಪದ್ಧತಿ ಅಳವಡಿಸಿ, ದೈಹಿಕ ಚಟುವಟಿಕೆ ಹೆಚ್ಚಿಸುವುದು, ಒತ್ತಡ ನಿರ್ವಹಣೆ ಮತ್ತು ನಿಯಮಿತ ಚೆಕ್​ ಅಪ್ ನಡೆಸುವ ಮೂಲಕ ರಕ್ತದ ಸಕ್ಕರೆ ಮಟ್ಟ ನಿರ್ವಹಣೆಗೆ ಒತ್ತು ನೀಡಲಾಗಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಮಧುಮೇಹ; ಆಹಾರ ಪದ್ಧತಿಯ ಬಗ್ಗೆ ಇರಲಿ ಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.