ಡಬ್ಲಿನ್(ಐರ್ಲೆಂಡ್): 1940ರಿಂದ ಪ್ರಾರಂಭವಾದ ಪ್ರತಿ ಮತ್ತು ಪಾಲಿಫ್ಲೋರೊ ಆಲ್ಕೈಲ್ ಪದಾರ್ಥಗಳು (ಪಿಎಫ್ಎಎಸ್) ಮಾನವ ನಿರ್ಮಿತ ರಾಸಾಯನಿಕ ಎಂದೇ ಚಿರಪರಿಚಿತವಾಗಿದ್ದು, ಆಧುನಿಕ ಜಗತ್ತಿನೊಂದಿಗೆ ನೇಯ್ದುಕೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಎಚ್ಚರಿಕೆ ಗಂಟೆಯನ್ನು ಮೂಡಿಸುತ್ತಿದೆ.
ಪಿಎಫ್ಎಎಸ್ ಪರಿಸರ ಮತ್ತು ಮಾನವರ ಆರೋಗ್ಯದ ಮೇಲೆ ನಿರಂತರ ಪರಿಣಾಮ ಹೊಂದಿದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿದೆ. ಹಾಗಾದರೆ ಇಂಗ್ಲೆಂಡ್ ಮತ್ತು ಐರ್ಲೆಂಡ್ ಎದುರಿಸುತ್ತಿರುವ ಸಮಸ್ಯೆ ಏನು? ಇದರಲ್ಲಿ ಸರಿಸುಮಾರು 4,700 ವಿಧಗಳಿದ್ದು, ಅವರು ಅಸಾಧಾರಣ ಕಾರ್ಬನ್ ಫ್ಲೋರಿನ್ (ಸಿ-ಎಫ್) ಬಂಧಗಳಿಗಿಂತ ವಿಭಿನ್ನವಾಗಿದ್ದು, ರಸಾಯನಶಾಸ್ತ್ರದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಸ್ಥಿರತೆಗಳನ್ನು ಹಲವು ಪ್ರಮುಖ ಉತ್ಪನ್ನಗಳ ಅಂಶದಲ್ಲಿ ಪ್ರಮುಖವಾಗಿದೆ. ಪಿಎಫ್ಎಎಸ್ ಹಲವು ವಿಧದಲ್ಲಿದೆ. ಎಣ್ಣೆ, ಗ್ರೀಸ್ ನಿರೋಧಕ ಆಹಾರ ಪ್ಯಾಕೇಜ್, ನಾನ್ ಸ್ಟಿಕ್ ಕುಕ್ವೇರ್, ನೀರು ಮತ್ತು ಅಗ್ನಿಶಾಮಕ ಫೋಮ್, ಸ್ಟ್ರೈನ್ ರೆಸಿಸ್ಟೆಂಟ್ ಟೆಕ್ಸ್ಟೈಲ್ಸ್ಗಳಲ್ಲಿ ಇವುಗಳು ಪ್ರಮುಖ ಪಾತ್ರವನ್ನು ಹೊಂದಿವೆ. ಇದು ನಮ್ಮ ದೈನಂದಿನ ಜೀವನದಲ್ಲಿ ಬಳಕೆ ಮಾಡಲಾಗುತ್ತಿದೆ. ಕಾರ್ಬನ್ ಫ್ಲೋರಿನ್ ಬಂಧಗಳು ನೈಸರ್ಗಿಕ ಪ್ರಕ್ರಿಯೆಗಳನ್ನು ಸ್ಥಗಿತವಾಗುವಂತೆ ಮಾಡುತ್ತದೆ.
ಆಜೀವ ರಾಸಾಯನಿಕ: ಇದು ಕುಡಿಯುವ ನೀರು, ಮಣ್ಣು, ಗಾಳಿ ಮತ್ತು ಅರ್ಕಾಟಿಕ್ ಐಸ್ಗಳಲ್ಲಿ ಕಂಡು ಬರುತ್ತಿದ್ದು, ಇದು ಕಾಳಜಿ ವಿಷಯವಾಗಿದೆ. ಇತ್ತೀಚಿಗೆ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದಂತೆ ಪಿಎಫ್ಎಎಸ್ಗಳಿಗೆ ಒಡ್ಡಿಕೊಳ್ಳುತ್ತಿರುವ ಮಾನವರು ಮತ್ತು ಪ್ರಾಣಿಗಳಲ್ಲಿ ಆರೋಗ್ಯ ಹಾನಿ ಕಂಡು ಬರುತ್ತಿದೆ. ಇದು ಕ್ಯಾನ್ಸರ್, ಯಕೃತ್ ಹಾನಿ, ರೋಗ ನಿರೋಧಕ ವ್ಯವಸ್ಥೆಗೆ ಅಪಾಯವನ್ನು ತಂದೊಡ್ಡುತ್ತಿದ್ದು, ಹಾರ್ಮೋನ್ಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತಿದೆ.
ಮಾನವನ ದೇಹದ ಮೇಲೆ ಹಾಗೂ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಇದನ್ನು ನಿರಂತರವಾಗಿ ಪತ್ತೆ ಮಾಡಬಹುದಾಗಿದೆ. ಇದು ದೇಹದ ಟಿಶ್ಯೂ ಮತ್ರು ದ್ರವದಲ್ಲಿ ಸಂಗ್ರಹವಾಗಬಹುದು. ಪಿಎಫ್ಎಎಸ್ ನದಿ, ಮಣ್ಣು ಮತ್ತು ಆಹಾರ ಸರಪಳಿಯಲ್ಲಿ ಹರಡುತ್ತದೆ. ಈ ರಾಸಾಯನಿಕವೂ ಪ್ರಾಣಿ ಮತ್ತು ಮಾನವರ ದೇಹದಲ್ಲಿ ಪತ್ತೆಯಾಗಲಿದೆ ಇದು ಇಲ್ಲಿ ಅನೇಕ ಸಮಯದ ಬಳಿಕ ಸಂಗ್ರಹವಾಗುತ್ತದೆ
ಪಿಎಫ್ಎಎಸ್ ಸಂಬಂಧಿತ ಆರೋಗ್ಯ ಅಪಾಯವೂ ಜಾಗತಿಕ ಕಾಳಜಿ ವಿಚಾರವಾಗಿದ್ದು, ನಿರಂತರ ಸಾವಯವ ಮಾಲಿನ್ಯಕಾರಕಗಳ ಮೇಲಿನ ಸ್ಟಾಕ್‌ಹೋಮ್ ಕನ್ವೆನ್ಷನ್‌ನಂತಹ ಸಂಸ್ಥೆಗಳು ಯುರೋಪಿಯನ್ ಒಕ್ಕೂಟದಲ್ಲಿ ಪಿಎಫ್ಎಎಸ್ನಂತಹವುಗಳ ಬಳಕೆ ಮೇಲೆ ನಿರ್ಬಂಧ ಹೇರಲು ಮುಂದಾಗಿವೆ. ಪಿಎಫ್ಎಎಸ್ನಿಂದಾಗಿ ಆರೋಗ್ಯದ ಮೇಲಿನ ದೀರ್ಘಕಾಲದ ಅಪಾಯ ತಿಳಿದಿಲ್ಲ. ಆದರೆ, ಇದು ಜಾಗತಿಕ ಕಾಳಜಿ ಹೆಚ್ಚಿಸಿದೆ.
ಎನ್ವಿರಾನ್ಮೆಂಟ್ ಏಜೆನ್ಸಿಯ 2021 ರ ವರದಿಯಲ್ಲಿನೀರಿನಲ್ಲಿ ಪಿಎಫ್ಎಎಸ್ನ ಪರಿಸರ ಮೇಲ್ವಿಚಾರಣೆಯ ಅವಶ್ಯಕತೆಯನ್ನು ಒತ್ತಿ ಹೇಳಿದೆ. ಈ ಅಂತರಗಳು ಗ್ರಾಹಕ ಉತ್ಪನ್ನಗಳು ಮತ್ತು ಕುಡಿಯುವ ನೀರಿನ ಜೀವನ ಚಕ್ರದಲ್ಲಿ ಪಿಎಫ್ಎಎಸ್ ಹೇಗೆ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯ ಕೊರತೆ ಒಳಗೊಂಡಿರುತ್ತದೆ. ಉದಾಹರಣೆಗೆ ಮರುಬಳಕೆ ಮತ್ತು ತ್ಯಾಜ್ಯ ವಿಲೇವಾರಿ ಅಭ್ಯಾಸಗಳು. ರಾಸಾಯನಿಕಗಳು ಒಡ್ಡಬಹುದಾದ ಅಪಾಯಗಳನ್ನು ಸರಿಯಾಗಿ ನಿರ್ಣಯಿಸಲು ಇದು ಕಷ್ಟಕರವಾಗಿಸುತ್ತದೆ.
ಪರಿಹಾರ: ಕೆಲವು ನಿರ್ದಿಷ್ಟ ಪಿಎಫ್ಎಎಸ್ ಔಷಧ ಮತ್ತು ವೈದ್ಯಕೀಯ ಬಳಕೆಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಆದರೆ, ಈ ಬಗೆಗಿನ ಸಂಶೋಧನೆ ಕೊರತೆ, ಪರೀಕ್ಷೆ ಮತ್ತು ಸಾರ್ವಜನಿಕ ಜಾಗೃತಿಯು ಈ ಸಮಸ್ಯೆ ದೀರ್ಘ ಕಾಲ ಉಳಿಯುವಂತೆ ಮಾಡಿದೆ. ಕಾರಣ ಈ ಶಾಶ್ವತ ರಾಸಾಯನಿಕದಲ್ಲಿರುವ ಪ್ರಯೋಜನಕಾರಿ ಅಂಶಗಳು. ಪಿಎಫ್ಎಎಸ್ ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಹಾನಿಯಾಗದ ಹೊಸ ರಾಸಾಯನಿಕ ಸಂಯುಕ್ತಗಳನ್ನು ಕಂಡುಹಿಡಿಯಲು ಸಂಶೋಧನೆಯನ್ನು ಒಳಗೊಂಡ ಸಮಗ್ರ ವಿಧಾನದ ಅಗತ್ಯವಿದೆ.
ಈ ಸಮಸ್ಯೆಗೆ ಪರಿಹಾರವೂ ಸಂಕೀರ್ಣವಾಗಿದೆ. ಇದನ್ನು ನಿಸ್ಸಂಶಯವಾಗಿ ಸಾಧಿಸಬಹುದಾಗಿದೆ. ಇದಕ್ಕೆ ಕಟ್ಟು ನಿಟ್ಟಿನ ನಿಯಮ, ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅಷ್ಟಕ್ಕೂ ಏನಿದು PFAS?: ಪರ್ - ಮತ್ತು ಪಾಲಿಫ್ಲೋರೊ ಆಲ್ಕೈಲ್ ಪದಾರ್ಥಗಳು (PFAS) 1950 ರ ದಶಕದಿಂದಲೂ ಪ್ರಪಂಚದಾದ್ಯಂತ ಗ್ರಾಹಕ ಉತ್ಪನ್ನಗಳಲ್ಲಿ ಬಳಸಲ್ಪಟ್ಟ ಸಂಶ್ಲೇಷಿತ ರಾಸಾಯನಿಕಗಳ ಒಂದು ದೊಡ್ಡ ಹಾಗೂ ಸಂಕೀರ್ಣವಾದ ಗುಂಪಾಗಿದೆ. ಇವು ವಿವಿಧ ದೈನಂದಿನ ಉತ್ಪನ್ನಗಳಲ್ಲಿ ಬಳಕೆ ಮಾಡುವ ಪದಾರ್ಥಗಳಾಗಿವೆ. ಉದಾಹರಣೆಗೆ, ಆಹಾರವನ್ನು ಪ್ಯಾಕೇಜಿಂಗ್ ಅಥವಾ ಕುಕ್‌ವೇರ್‌ಗೆ ಅಂಟಿಕೊಳ್ಳದಂತೆ ಇರಿಸಲು PFAS ಅನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಜಗತ್ತಿನ ಬೇರೆ ದೇಶಗಳಿಂದ ಭಾರತೀಯರಿಗೆ ಹೆಚ್ಚು ಮಾರಣಾಂತಿಕವಾಗುತ್ತಿರುವ ವಾಯು ಮಾಲಿನ್ಯ; ಅಧ್ಯಯನ